ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆ

0

ಉಜಿರೆ: ಲಾಯಿಲ ಗಣೇಶ್ ಪ್ರಸಾದ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಗೊಂಡ ನ್ಯಾಶನಲ್ ಬಯೋಫ್ಯುಯೆಲ್ ಎನರ್ಜಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನೆಯು ಜ.12 ರಂದು (ಇಂದು) ಉಜಿರೆ ಶ್ರೀ ಸೀತಾರಾಮ ಕಲಾ ಮಂದಿರ ಹಳೆಪೇಟೆಯಲ್ಲಿ ಜರುಗಿತು.

ಕಛೇರಿ ಉದ್ಘಾಟನೆಯನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಕಾವೂರು ಶಾಖಾ ಮಠದ ಪೂಜ್ಯ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ನೆರವೇರಿಸಿದ್ದರು. ಗಣಕಯಂತ್ರವನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್‌ಕೃಷ್ಣ ಪಡ್ವೆಟ್ನಾಯ, ಕ್ಯಾಶ್ ಕೌಂಟರ್ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಷೇರು ಪ್ರಮಾಣ ಪತ್ರ ವಿತರಣೆ ಮಾಜಿ ಸಚಿವ ಕೆ. ಗಂಗಾಧರ ಗೌಡ, ಭದ್ರತಾಕೋಶ ಹಾಗೂ ಉಳಿತಾಯ ಖಾತೆ ಪುಸ್ತಕ ವಿತರಣೆಯನ್ನು ಸಹಕಾರಿ ಸಂಘಗಳ ಉಪನಿಬಂಧಕ ರಮೇಶ್ ಹೆಚ್.ಎನ್., ಸಾಲದ ಚೆಕ್ ವಿತರಣೆಯನ್ನು ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಹೆಚ್. ಪದ್ಮ ಗೌಡ, ಬಯೋಡಿಸೇಲ್ ಇಂಧನ ಘಟಕ ಪ್ರಾತ್ಯಕ್ಷಿಕೆ ಉದ್ಘಾಟನೆಯನ್ನು ಹೈಕೋರ್ಟ್ ವಕೀಲರು, ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಕೆ.ಎಂ. ನಾಗೇಶ್ ಕುಮಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಾಣಿ ಶಿಕ್ಷಣ ಸಂಸ್ಥೆಗಳು ಹಾಗೂ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ, ಲಾಯಿಲ ಗ್ರಾ.ಪಂ. ಅಧ್ಯಕ್ಷ ಆಶಾ ಬೆನಡಿಕ್ಟ ಸಲ್ಡಾನ, ಬೆಳ್ತಂಗಡಿ ಗಣೇಶ್ ಪ್ರಸಾದ್ ಡ್ರೈವಿಂಗ್ ಸ್ಕೂಲ್‌ನ ಪಾಂಡುರಂಗ ಭಂಡಾರ್ಕರ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ನಿವ್ರತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ರುಕ್ಮಯ್ಯ ಗೌಡ ಹಾಗೂ ಜನಾರ್ದನರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ನಾಗೇಶ್ ಕುಮಾರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಕೆ., ಉಪಾಧ್ಯಕ್ಷ ವಿಶ್ವನಾಥ್ ಕೆ ಹಾಗೂ ನಿರ್ದೇಶಕರುಗಳಾದ ಆನಂದ ಕೃಷ್ಣ ಎನ್, ಶರತ್ ಪಿ.ಎನ್, ಶ್ರೀಮತಿ ಸುಧಾ ಪಿ, ಶ್ರೀಮತಿ ಹೇಮಾವತಿ, ಮೋಹನ ಗೌಡ, ನಿತ್ಯಾನಂದ ಗೌಡ, ಡಿ. ದಿನೇಶ್ ಗೌಡ, ಜಗದೀಶ್ ಶೆಟ್ಟಿ ಎಂ. , ಲಕ್ಷ್ಮೀಕಾಂತ್, ದಿವ್ಯಾ ಕೆ.ಎಂ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here