ಬೆಳ್ತಂಗಡಿ: ಕಣಿಯೂರು ಗ್ರಾಮದ ಪದ್ಮುಂಜದಲ್ಲಿ ಅ. 12ರಂದು ನೂತನವಾಗಿ ಶುಭಾರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಕಣಿಯೂರು ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಕಣಿಯೂರು ಪಂಚಾಯತ್ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಗಾಯತ್ರಿ ಗೋಪಾಲ ಗೌಡ, ಕಟ್ಟಡ ಮಾಲಕರಾದ ಸುಬ್ಬಣ್ಣ, ರಾಮಚಂದ್ರ ಗೌಡ ಮತ್ತು ಸಾವಿತ್ರಿ ರಾಮಚಂದ್ರ ಗೌಡ ಹಾಗೂ ಹಲವಾರು ಗಣ್ಯರು, ಗ್ರಾಹಕರು ಉಪಸ್ಥಿತರಿದ್ದರು. ವಿಜಯ, ಶಾಂಭವಿ ವಿಜಯ್, ಶೋಭಾ ಲಕ್ಷ್ಮಣ ಬಂಟ್ವಾಳ ಆಗಮಿಸಿದವರನ್ನು ಸ್ವಾಗತಿಸಿ ಸತ್ಕರಿಸಿದರು.