ಮೇಲಂತಬೆಟ್ಟು : ದೀಪಾವಳಿ ಹಬ್ಬದ ಪ್ರಯುಕ್ತ ಮೋಟೋಕ್ರಾಸ್ 2025 ಬೈಕ್‌ರೇಸ್ ಸ್ಪರ್ಧೆಯು ಮೇಲಂತಬೆಟ್ಟುವಿನ ಪಕ್ಕಿದಕಲ ಎಂಬಲ್ಲಿ ಅ.19ರಂದು 11 ಗಂಟೆಗೆ ನಡೆಯಲಿದೆ.
ಬೈಕ್‌ರೇಸ್ ಸ್ಪರ್ಧೆಯು ಮುಕ್ತ ವಿಭಾಗ, ಸ್ಥಳೀಯ ವಿಭಾಗ ಮತ್ತು ಅನನುಭವಿ ವಿಭಾಗ ಎಂಬ 3ವಿಭಾಗಗಳಲ್ಲಿ ನಡೆಯಲಿದ್ದು, ಪ್ರತೀ ವಿಭಾಗದಲ್ಲಿಯೂ ವಿಜೇತರಿಗೆ ಆಕರ್ಷಕ ಮೋಟೋಕ್ರಾಸ್ ಟ್ರೋಫಿ ಮತ್ತು ನಗದು ಬಹುಮಾನ ಹಾಗೂ ಬೆಸ್ಟ್ ರೈಡರ್ ಪ್ರಶಸ್ತಿ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.