




ಧರ್ಮಸ್ಥಳ: ನೇತ್ರಾವತಿ ಸ್ನಾನ ಘಟ್ಟದ ಸಮೀಪ ನದಿಯಲ್ಲಿ ಸುಮಾರು 55 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ನ.23ರಂದು ಪತ್ತೆಯಾಗಿದೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇದ್ದು ಗುರುತು ಸಿಗದಂತಾಗಿದೆ. ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ನದಿಯಿಂದ ಮೃತದೇಹ ಮೇಲೆತ್ತಲು ಪೊಲೀಸರಿಗೆ ಸಹಕರಿಸಿದರು.


ಮೃತರ ವಾರೀಸುದಾರರು ಪತ್ತೆಯಾದಲ್ಲಿ ಧರ್ಮಸ್ಥಳ ಠಾಣೆಯ ಪಿಎಸ್ಐ 8277986449 ಮತ್ತು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರು 9480805336 ನಂಬರಿಗೆ ಮಾಹಿತಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.









