ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಕೇಸ್ ರದ್ದು ಕೋರಿ ಕರ್ನಾಟಕ ಹೈ ಕೋರ್ಟ್ ಗೆ ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ಸಲ್ಲಿಸಿದ್ದಾರೆ. ದ.ಕ ಜಿಲ್ಲಾ ಪ್ರಧಾನ ಸೆಷನ್ಸ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ ಆದ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಮಾಡಲು ಅರ್ಜಿ ಸಲ್ಲಿಸಿದ್ದು, ಪ್ರಕರಣ ರದ್ದು ಪಡಿಸಿ ಮುಂದಿನ ಎಲ್ಲಾ ಕ್ರಮಗಳಿಗೆ ತಡೆ ನೀಡಲು ತಿಮರೋಡಿ ಪರ ವಕೀಲರು ಅರ್ಜಿಯಲ್ಲಿ ನಮೂದಿಸಿದ್ದಾರೆ. ಅ.9ರಂದು ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದ.ಕ.ಜಿಲ್ಲಾ ಪ್ರಧಾನ ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಈ ಪ್ರಕರಣ ದಾಖಲಾದ ನಂತರ ಕಳೆದ 25 ದಿನಗಳಿಂದ ತಲೆ ಕರೆಸಿಕೊಂಡಿರೋ ಮಹೇಶ್ ಶೆಟ್ಟಿ ತಿಮರೋಡಿಯವರು ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಎಸ್ಐಟಿ ಎಸ್ಪಿ ಸಿ.ಎ.ಸೈಮನ್ ರನ್ನ ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. Arms Act, 1959 ನ ಸೆಕ್ಷನ್ಗಳು 25(1), 25(1-A), 25(1-B)(a) ಅಡಿಯಲ್ಲಿ ದಾಖಲಾದ ಎಫ್ಐಆರ್, ದೂರು ಹಾಗೂ ಮುಂದುವರಿದಿರುವ ಅಪರಾಧ ಕ್ರಮಗಳನ್ನು ರದ್ದುಪಡಿಸಲು ಮನವಿ ಮಾಡಲಾಗಿದೆ.