




ಶಿಬಾಜೆ: ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಾಜಾಂಗಣ ಸುಮಾರು 30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಮುಕ್ತಾಯ ಹಂತದಲ್ಲಿದೆ. ದೇವಳದ ವ್ಯವಸ್ಥಾಪನ ಸಮಿತಿ ಮತ್ತು ಊರ ಪ್ರಮುಖರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಬಳಿ ರಾಜಾಂಗಣ ಕಾಮಗಾರಿಗೆ ದೇಣಿಗೆ ನೀಡುವಂತೆ ವಿನಂತಿಸಿಕೊಂಡಿದ್ದರು. ಅದರಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇವರ ಪ್ರಸಾದ ರೂಪದಲ್ಲಿ 5ಲಕ್ಷ ಮೊತ್ತದ ಡಿ.ಡಿ. ಯನ್ನು ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಯೋಜನಾಧಿಕಾರಿ ಯಶೋಧರ್, ಅರಸಿನಮಕ್ಕಿ ವಲಯ ಮೇಲ್ವಿಚಾರಕಿ ಶಶಿಕಲಾ, ಸೇವಾ ಪ್ರತಿನಿಧಿ ಯೋಗೀಶ್ ಬೇಂಗಳ, ಅರುಣಾ ಗಣೇಶ್, ತಾಲೂಕು ಜನಜಾಗೃತಿ ಸದಸ್ಯರಾದ ಹೆಚ್. ಎಸ್. ಚೆನ್ನಪ್ಪ ಗೌಡ ಆಗಮಿಸಿ ವ್ಯವಸ್ಥಾಪನ ಸಮಿತಿಗೆ ಡಿ.ಡಿ ಹಸ್ತಾಂತರಿಸಿದರು.


ಒಕ್ಕೂಟದ ಅಧ್ಯಕ್ಷ ಅಣ್ಣು ಗೌಡ, ನಿಕಟ ಪೂರ್ವ ಅಧ್ಯಕ್ಷ ರಾಮ್ಮಣ್ಣ ಪೂಜಾರಿ ಪೆರ್ಲ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ, ಸಮಿತಿ ಸದಸ್ಯರಾದ ಬಾಲಚಂದ್ರ ಶೆಟ್ಟಿಗಾರ್, ಸುಂದರ ಎಂ.ಕೆ., ವಸಂತ ಗೌಡ, ಇ. ವಿ ಸತೀಶ್, ಗಂಗಾಧರ ಗೌಡ, ಹಾಗೂ ದೇವಳದ ಅರ್ಚಕರಾದ ಶ್ರೀಧರ್ ಉಪಾಧ್ಯಾಯ, ರಾಜೇಶ್ ಭಟ್ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು.









