ಬೆಳಾಲು: ನಿಂತಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಬೆಳಾಲು: ನಿಂತಿಕಲ್ಲು ಅಂಗನವಾಡಿಯಲ್ಲಿ ನ. 21ರಂದು ಮಕ್ಕಳ ದಿನಾಚರಣೆಯನ್ನು ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪುಟಾಣಿ ಲಹನ್ವಿ ವಹಿಸಿಕೊಂಡರು. ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಸುರೇಂದ್ರ ಗೌಡ ಎಸ್., ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಹೇಮಾವತಿ, ಮಾಜಿ ಅಧ್ಯಕ್ಷೆ ಭವಾನಿ, ಸ್ಥಳೀಯ ಗಣ್ಯರಾದ ಉಷಾದೇವಿ ಕಿಣ್ಯಾಜೆ, ಆಶಾ ಕಾರ್ಯಕರ್ತೆ ಶೀಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ತಾಯಂದಿರು ಹಾಗೂ ಸಂಘದ ಸದಸ್ಯರು ಹಾಜರಿದ್ದರು.

ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಮನೋರಂಜನ ಕಾರ್ಯಕ್ರಮವನ್ನು ನಡೆಸಲಾಯಿತು. ಸಹಾಯಕಿ ವಿಮಲಾ ಸಹಕರಿಸಿದರು. ಮಾಯ ಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಅಂಗನವಾಡಿಗೆ ಮರದ ಟೀಪಾಯ್ ಯನ್ನು ಕೊಡುಗೆಯಾಗಿ ನೀಡಿದರು. ಶೀಲಾವತಿ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಭಾರತಿ ಇ. ನಿರೂಪಿಸಿದರು. ಅಶ್ವಿನಿ ವಂದಿಸಿದರು.

LEAVE A REPLY

Please enter your comment!
Please enter your name here