ಉಜಿರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಪಥಸಂಚಲನ

0

ಉಜಿರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಪಥಸಂಚಲನವು ಅ.12ರಂದು ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡು ಸಿದ್ಧವನದವರೆಗೆ ಸಾಗಿ ಮರಳಿ ಉಜಿರೆ ರಥಬೀದಿಗೆ ತಲುಪಿ ಮುಕ್ತಾಯಗೊಂಡಿತು.

ಸ್ವಯಂಸೇವಕರಲ್ಲಿ ಶಿಸ್ತು, ಏಕತೆ ಮತ್ತು ಸಂಘಟನೆಯ ಶಕ್ತಿಯನ್ನು ಬೆಳೆಸುವುದು ಪಥಸಂಚಲನದ ಮೂಲ ಉದ್ದೇಶವಾಗಿದ್ದು, ಪಥಸಂಚಲನದಲ್ಲಿ ಇಪ್ಪತ್ತೈದು ಗ್ರಾಮದಿಂದ 1013 ಸಂಖ್ಯೆಯಲ್ಲಿ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

ಪಥಸಂಚಲನದಲ್ಲಿ ವಿಧಾನಪರಿಷತ್‌ ಶಾಸಕ ಪ್ರತಾಪ್‌ ಸಿಂಹ ನಾಯಕ್, ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ, ರಾಮಚಂದ್ರ ಶೆಟ್ಟಿ, ಭರತ್, ಪುತ್ತೂರು ಜಿಲ್ಲಾ ಸಂಘ ಚಾಲಕ್ ವಿನಯ್ ಚಂದ್ರ, ವಿಭಾಗ ವ್ಯವಸ್ಥಾ ಪ್ರಮುಖ್ ಸುಬ್ರಹ್ಮಣ್ಯ ಮಾಣಿ, ಪುತ್ತೂರು ಜಿಲ್ಲಾ ವ್ಯವಸ್ಥಾ ಪ್ರಮುಖ್‌ ಅರುಣ್ ಬಿ.ಕೆ., ಪ್ರಶಾಂತ್ ಉಜಿರೆ ಉದ್ಯೋಗಿ ಕಾರ್ಯ ಪ್ರಮುಖ್‌, ತಾಲೂಕು ಕಾರ್ಯವಾಹ ರಾಜೇಶ್ ತೋಟತ್ತಾಡಿ, ತಾಲೂಕು ಸಹ ಕಾರ್ಯವಾಹ ತಿಲಕ್ ಅನಾರು, ಪುತ್ತೂರು ಜಿಲ್ಲಾ ಪ್ರಚಾರ ಪ್ರಮುಖ್ ಗಣೇಶ ಕೊಕ್ಕಡ, ಉಜಿರೆ ತಾಲೂಕು ಸಂಪರ್ಕ ಪ್ರಮುಖ್ ಶಿವಪ್ರಸಾದ್ ಸುರ್ಯ, ಮಂಗಳೂರು ವಿಭಾಗದ ಸಾಮರಸ್ಯ ಪ್ರಮುಖ್‌ ಶಿವಪ್ರಸಾದ್ ಮಲೆಬೆಟ್ಟು, ಪುತ್ತೂರು ಜಿಲ್ಲಾ ಸಾಮರಸ್ಯ ಪ್ರಮುಖ್‌ ರವೀಶ್ ಪಡುಮಲೆ, ಕೃಷ್ಣ ಭಟ್ ಕೊಕ್ಕಡ, ಉದಯ್ ಸುಬ್ರಹ್ಮಣ್ಯ, ಧ್ರುವ, ಗಣೇಶ, ಭರತ್‌, ಮುಖ್ಯ ಶಿಕ್ಷಕ್ ಸುದರ್ಶನ್ ಕನ್ಯಾಡಿ, ಪ್ರಾರ್ಥನೆ ಪ್ರಮುಖ್ ಯೋಗೀಶ್ ಅರಸಿನಮಕ್ಕಿ, ಗೋಸ್ಟ್ ಪ್ರಮುಖ್ ರಾಮದಾಸ್ ಭಂಡಾರ್ಕರ್, ಶ್ರೇಷ್ಠ ಪಡಿವಾಳ್‌ ಹಾಗೂ ಕನ್ಯಾಡಿ ಸೇವಾಧಾಮದ ವಿನಾಯಕ ರಾವ್, ಲಕ್ಷ್ಮಣ ಅರಣೆಪಾದೆ, ಜಗದೀಶ್ ನಾಯ್ಕ ನೀರಚಿಲುಮೆ ರವರುಗಳು ವೀಲ್ ಚೇರ್ ಮೂಲಕ ಪಥಸಂಚಲನದಲ್ಲಿ ಭಾಗಿಯಾದರು. ಪಥಸಂಚಲನ ಪೂರ್ಣಗೊಂಡ ಬಳಿಕ ಉಜಿರೆಯ ಕಾರ್ಯಕರ್ತರಿಂದ ಪಾನೀಯ ಹಾಗೂ ಬನ್ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here