








ಅಳದಂಗಡಿ : ಬಡಗಕಾರಂದೂರು ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಪ್ರತಿಷ್ಠಾವಾರ್ಷಿಕ ವರ್ಧಂತಿ ಉತ್ಸವ ವು ಫೆ.07ರಂದು ಶನಿವಾರ ವಾರ್ಷಿಕ ವರ್ಧಂತಿ ಉತ್ಸವವು (ವಾರ್ಷಿಕ ಜಾತ್ರೆ)ಕ್ಷೇತ್ರದ ತಂತ್ರಿವರ್ಯರಾದ ಪೊಳಲಿ ಕೋಡಿಮಜಲು ಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ ನಡೆಯಲಿದೆ. ಪೂರ್ವಾಹ್ನ ಗಂಟೆ 8 ರಿಂದ 12 ತೆಂಗಿನಕಾಯಿ ಗಣಹವನ,ಪೂರ್ವಾಹ್ನ ಗಂಟೆ 9 ರಿಂದ 25 ಕಲಶಾಭಿಷೇಕ, ಪ್ರಧಾನ ಹವನ, ಸ್ಥಳೀಯರಿಂದ ಭಜನಾ ಸತ್ತಂಗ,ಮಧ್ಯಾಹ್ನ ಗಂಟೆ 12ಕ್ಕೆ ಪ್ರಸನ್ನ ಪೂಜೆ, ಮಹಾ ಮಂಗಳಾರತಿ,ಮಧ್ಯಾಹ್ನ ಗಂಟೆ 12-30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 5ರಿಂದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ, ಬಳಂಜ ಮತ್ತು ಪಂಚಶ್ರೀ ಕುಣಿತ ಭಜನಾ ಮಂಡಳಿ, ನಾಲ್ಕೂರು ಇವರಿಂದ ನೃತ್ಯ ಭಜನೆ,ಸಾಯಂಕಾಲ ಗಂಟೆ 6 ರಿಂದ ಶ್ರೀರಂಗಪೂಜೆ,ರಾತ್ರಿ ಗಂಟೆ 7 ರಿಂದ ಶ್ರೀ ದೇವರ ಉತ್ಸವ,ರಾತ್ರಿ ಗಂಟೆ 9 ರಿಂದ ಸಾಂಸ್ಕೃತಿಕ ಕಾರ್ಯಕ್ರಮಕದಂಬ ನಾಟಕ ತಂಡದಿಂದ ರಂಗಭೂಮಿಯಲ್ಲಿ ಮತ್ತೊಂದು ಹೊಸ ಹೆಜ್ಜೆ”ರಂಗಭೂಷಣ” ಮಣಿ ಕೋಟೆಬಾಗಿಲು ಕಥೆ ಸಂಭಾಷಣೆ ನಿರ್ದೇಶನ ಸಾರಥ್ಯದಪಿಂಗಾರ ಕಲಾವಿದರ್ ಬೆದ್ರಅಭಿನಯಿಸುವ ಕುತೂಹಭರಿತ ತುಳು ಹಾಸ್ಯ ನಾಟಕ ಓಂಕಾರ ನಾಟಕ ಪ್ರದರ್ಶನ ಗೊಳ್ಳಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಶಶಿಧರ್ ಡೋಂಗ್ರೆ ಸೇನೆರೆಬೈಲು,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ನಮನ ಇವರು ತಿಳಿಸಿದ್ದಾರೆ.









