ನಿಟ್ಟಡೆ: ಸರಕಾರಿ ಶಾಲೆಯಲ್ಲಿ ಸಡಗರದ ವಾರ್ಷಿಕೋತ್ಸವ: ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ವೈಭವ

0

ನಿಟ್ಟಡೆ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಡಿ.20ರಂದು ‘ಶಾಲಾ ವಾರ್ಷಿಕೋತ್ಸವ ಸಂಭ್ರಮ-2025’ ಜರುಗಿತು. ಪೂರ್ವಾಹ್ನ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಜನಾರ್ಧನ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ಅನಿತಾ ಉದ್ಘಾಟಿಸಿದರು.

ಅತಿಥಿಗಳಾಗಿ ಪಡಂಗಡಿ ಗ್ರಾ.ಪಂ ಸದಸ್ಯೆ ಶುಭ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಜಾನಕಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸ್ವಾತಿ, ತಾಯಂದಿರ ಸಮಿತಿ ಅಧ್ಯಕ್ಷೆ ಶ್ವೇತಾ, ಮಾಜಿ ಗ್ರಾ.ಪಂ ಸದಸ್ಯ ಪದ್ಮನಾಭ ಪೂಜಾರಿ ಭಾಗವಹಿಸಿದ್ದರು. ಶಾಲಾ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಆರತಿ ಸ್ವಾಗತಿಸಿದರು. ಗೌರವ ಶಿಕ್ಷಕಿ ಪ್ರತಿಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಅಪರಾಹ್ನ ಜಿ.ಪಂ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಭೇಟಿ ನೀಡಿ ಶುಭ ಹಾರೈಸಿದರು. ಜ್ಞಾನದೀಪ ಶಿಕ್ಷಕಿ ಸುಜಾತ ವಂದಿಸಿದರು.

ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ರವರು ಅಶ್ರಫ್ ವಹಿಸಿದ್ದರು. ನಿವೃತ್ತ ಶಿಕ್ಷಕ ಶಿವಶಂಕರ್ ಭಟ್ ದಿಕ್ಸೂಚಿ ಭಾಷಣಗೈದರು. ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಅಗತ್ಯವಿರುವ ಎರಡು ತರಗತಿ ಕೊಠಡಿಗಳನ್ನು ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕುಕ್ಕೇಡಿ ಗ್ರಾ.ಪಂ ಸದಸ್ಯ ಜನಾರ್ಧನ ಪೂಜಾರಿ, ಗುಣವತಿ, ತೇಜಾಕ್ಷಿ, ರಜನಿ, ಉದ್ಯಮಿ ಕಿರಣ್ ಮಂಜಿಲ ಹೊಕ್ಕಾಡಿಗೋಳಿ, ದಾನಿಗಳಾದ ರಾಧಾಕೃಷ್ಣ ಕೋಟ್ಯಾನ್, ಶಿವಪ್ಪ ಪೂಜಾರಿ (ಗಹನ ಫಾರ್ಮಾ), ಸುಂದರ ಅಮೈ, ಸಂಪತ್ ಕುಮಾರ್ ಕೊಂಬ ಕುಬಲಬೆಟ್ಟು, ಅಶೋಕ್ ಪಾಣೂರು, ನಾರಾಯಣ ಪೂಜಾರಿ ಬೂತೇರು, ಮನ್ಸೂರ್, BIERT ಜಗದೀಶ್, ಮಂಜುಶ್ರೀ ಭಜನಾ ಮಂಡಳಿ ಅಧ್ಯಕ್ಷ ಆನಂದ ಟೈಲರ್, ಕುಂಡದಬೆಟ್ಟು ಜುಮ್ಮಾ ಮಸೀದಿ ಧರ್ಮಗುರುಗಳು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತರಾಜ್, ತಾಯಂದಿರ ಸಮಿತಿ ಅಧ್ಯಕ್ಷೆ ಶ್ವೇತಾ, ಮಾಜಿ ಎಸ್‌ಡಿಎಂಸಿ ಸದಸ್ಯ ಸತೀಶ್ ಹೆಗ್ಡೆ, ನಿವೃತ್ತ ಪೊಲೀಸ್ ಅಧಿಕಾರಿ ಯೂಸುಫ್, ಕುಂಭಶ್ರೀ ಶಿಕ್ಷಣ ಸಂಸ್ಥೆಯ ಸ್ಥಾಪಕ ಗಿರೀಶ್ ಕೆ.ಎಚ್. ಹಾಗೂ ಸಂಚಾಲಕ ಅಶ್ವಿತ್ ಕುಲಾಲ್, ಶಾಲಾ ಮುಖ್ಯಮಂತ್ರಿ ಸುಶಾನ್ ಉಪಸ್ಥಿತರಿದ್ದರು.

ಸನ್ಮಾನ – ಗೌರವಾರ್ಪಣೆ: ಕಾರ್ಯಕ್ರಮದಲ್ಲಿ ದಾನಿಗಳಾದ ರಾಧಾಕೃಷ್ಣ ಕೋಟ್ಯಾನ್, ಮನ್ಸೂರ್, ನವಾಜ್ ಕುಕ್ಕೇಡಿ, ಮಾಜಿ sdmc ಸದಸ್ಯರಾದ ಜಯಲಕ್ಷ್ಮಿ. ಎಸ್‌ಡಿಎಂಸಿ ಅಧ್ಯಕ್ಷನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ವತಿಯಿಂದ ಶಿಕ್ಷಕ ವೃಂದಕ್ಕೆ ‘ಗುರುವಂದನೆ’ ಸಲ್ಲಿಸಲಾಯಿತು. ಇದೇ ವೇಳೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕಿ ಆರತಿ ಅವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕಿ ಆರತಿರವರು ವರದಿ ವಾಚಿಸಿದರು. ರಾತ್ರಿ ಶಾಲಾ ಹಾಗೂ ಹಳೆ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಯಶಸ್ವಿಯಾಗಿ ಸಂಪನ್ನಗೊಂಡಿತು. ಶಿಕ್ಷಕಿ ಅನಿತಾರವರು ಸ್ವಾಗತಿಸಿ, ಶಿಕ್ಷಕರಾದ ಗಣೇಶ್ ಮತ್ತು ಸ್ಮಿತಾ ಕೆ. ನಿರೂಪಿಸಿದರು. ಸಹಶಿಕ್ಷಕಿ ರಜನಿ ವಂದಿಸಿದರು.

LEAVE A REPLY

Please enter your comment!
Please enter your name here