ಬೆಳ್ತಂಗಡಿ ವಕೀಲರ ಸಂಘದಿಂದ ಬೆನಕ ಆಸ್ಪತ್ರೆಯಲ್ಲಿ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ

0

ಉಜಿರೆ: ಬೆಳ್ತಂಗಡಿ ತಾಲೂಕು ಸೇವೆಗಳ ಸಮಿತಿ ಹಾಗೂ ಬೆಳ್ತಂಗಡಿ ವಕೀಲರ ಸಂಘ ಸಂಯುಕ್ತ ಆಶಯದಲ್ಲಿ ಉಜಿರೆ ಬೆನಕ ಆಸ್ಪತ್ರೆಯ ವಠಾರದಲ್ಲಿ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ ಡಿ. 23ರಂದು ಹಮ್ಮಿಕೊಳ್ಳಲಾಯಿತು. ಉದ್ಘಾಟಕರಾಗಿ ಗೌರವಾನ್ವಿತ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಡಿ.ಎಚ್. ಮತ್ತು ಬೆಳ್ತಂಗಡಿ ಜೆಎಂಎಫ್ ನ್ಯಾಯಾಲಯ, ಅಧ್ಯಕ್ಷತೆಯನ್ನು ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗೋಪಾಲಕೃಷ್ಣ ಕೆ. ಹಾಗೂ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೋ , ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಕೋಶಾಧಿಕಾರಿ ಮಮ್ತಾಜ್ ಬೇಗಂ, ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ವಕೀಲರು ಆರ್. ಸುಭಾಷಿಣಿ ಆಗಮಿಸಿದ್ದರು.

ಸಭೆಯ ಉದ್ಘಾಟನೆಯನ್ನು ಅಧ್ಯಕ್ಷ ಗೋಪಾಲಕೃಷ್ಣ ಕೆ. ವಹಿಸಿದ್ದರು. ವಿಜಯೇಂದ್ರ ಡಿ.ಎಚ್. ಅವರು ಹೂವಿನ ಗಿಡಕ್ಕೆ ನೀರನ್ನು ಹಾಕುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಾನೂನಿನ ಅರಿವು ಕಾರ್ಯಕ್ರಮ ನೆರವೇರಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ಈ ಕಾರ್ಯಕ್ರಮವು ಪ್ರತ್ಪ್ರಥಮವಾಗಿ ಆಸ್ಪತ್ರೆಯ ವಠಾರದಲ್ಲಿ ಆಗಿದ್ದು ವೈದ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕಾನೂನಿನ ಅರಿವು ಅಗತ್ಯ. ಅರಿವು ಇದ್ದಲ್ಲಿ ಮಾತ್ರ ಈ ಒಂದು ಸಂಸ್ಥೆ ನಡೆಸಲು ಸಾಧ್ಯ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಅಲೋಶಿಯಸ್ ಲೋಬೋ ಅವರು ಅದ್ಭುತವಾದ ಕಾರ್ಯಕ್ರಮ ಪ್ರಥಮ ಬಾರಿಗೆ ಆಸ್ಪತ್ರೆಯ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಹಾಗೂ ಈ ಆಸ್ಪತ್ರೆಯು ನಮ್ಮ ತಾಲೂಕಿನಾದ್ಯಂತ ಹೆಸರುವಾಸಿಯಾದ ಆಸ್ಪತ್ರೆಯಾಗಿದೆ. ಆಸ್ಪತ್ರೆಯ ವಠಾರವನ್ನು ನೋಡಿದಾಗಲೇ ಬರುವ ರೋಗಿಗಳ ಕಾಯಿಲೆ ಗುಣಮುಖವಾಗುತ್ತದೆ ಹಾಗೂ ಒಳ್ಳೆಯ ಸಂಬಂಧವನ್ನು ಗೋಪಾಲಕೃಷ್ಣ ಕೆ. ಅವರು ಇಟ್ಟುಕೊಂಡಿದ್ದಾರೆ. ಈ ಒಂದು ಆಸ್ಪತ್ರೆಯಲ್ಲಿ 24 ಗಂಟೆಗಳ ಸೇವೆಯು ಲಭ್ಯವಿದೆ ಯಾಕಂದ್ರೆ ಗೋಪಾಲಕೃಷ್ಣ ಅವರು, ಅವರ ಪತ್ನಿ, ಮಗಳು ಅಳಿಯ ಮಗ ಸೊಸೆ ಹೀಗೆ ಆರು ಜನ ಕೂಡ ಆಸ್ಪತ್ರೆಯಲ್ಲಿ ತನ್ನ ವೈದ್ಯಕೀಯ ಸೇವೆಯನ್ನು ನೀಡುವುದರಿಂದ ವೈದ್ಯರನ್ನು ಹುಡುಕಾಡಿಕೊಂಡು ಹೋಗುವ ಕೆಲಸ ಇರುವುದಿಲ್ಲ ಹಾಗೂ ಹೆಚ್ಚುವರಿ ವೈದ್ಯರನ್ನು ಅವರು ತರಿಸಿರುವುದರಿಂದ ಈ ಆಸ್ಪತ್ರೆಯಲ್ಲಿ 107 ಬೆಡ್ ಈಗ ಇದೆ. ಇನ್ನು ಮುಂದಕ್ಕೆ ಅದು 507 ಬೆಡ್ ಆಗಿ ಪರಿವರ್ತನೆಗೊಂಡು ಒಂದು ಒಳ್ಳೆಯ ಆಸ್ಪತ್ರೆಯಾಗಿ ಮೂಡಿ ಬರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಪ್ರಶಾಂತ್ ಎಂ ಅವರು ಕಾನೂನು ಮಾಹಿತಿ ನೀಡಿ ನಮ್ಮ ವಕೀಲರ ಸಂಘದಲ್ಲಿ ಕೆಲವೊಂದು ಕಾನೂನು ಸೇವೆಗಳು ಉಚಿತವಾಗಿ ಲಭ್ಯವಿದೆ. ಹಾಗೂ ನ್ಯಾಯಾಲಯದಲ್ಲಿ ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ಎಂದು ಹೇಳಿದರು.

ಅದೇ ರೀತಿ ಸಂಪನ್ಮೂಲ ವ್ಯಕ್ತಿ ಏಡ್ಸ್ ಕಾಯಿಲೆ ಬಗ್ಗೆ ಅರಿವು, ಜಾಗೃತಿಯನ್ನು ನೀಡಿದರು. ಹಾಗೂ ಅರಿವಿನ ಬಗ್ಗೆ ಯಾವ ರೀತಿಯ ಪರಿಣಾಮ ಹಾಗೂ ದುಷ್ಪರಿಣಾಮ ಬರುತ್ತವೆ ಎಂದು ತಿಳಿಸಿದರು.
ಡಾ. ಗೋಪಾಲಕೃಷ್ಣ ಕೆ. ಅವರು ಆಸ್ಪತ್ರೆಯ ವಠಾರದಲ್ಲಿ ಕಾನೂನಿನ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಕ್ಕೆ ವಕೀಲರ ಸಂಘಕ್ಕೆ ಹಾಗೂ ನ್ಯಾಯಾಲಯದ ನ್ಯಾಯಾಧೀಶರಿಗೆ ಧನ್ಯವಾದ ಸಲ್ಲಿಸಿದರು. ಕೋಶಾಧಿಕಾರಿ ಮಮ್ತಾಜ್ ಬೇಗಂ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here