ಸುಲ್ಕೇರಿಮೊಗ್ರು: ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಭಾಗ್ಯ: ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ

0

ಸುಲ್ಕೇರಿಮೊಗ್ರು: ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ದಟ್ಟ ಅಡವಿಯ ನಡುವೆ ಇರುವ ಸುಲ್ಕೇರಿಮೊಗ್ರು ಗ್ರಾಮದ ಪಂಜಾಲ, ಮಾಳಿಗೆ ಬೈಲಿನ 15 ಆದಿವಾಸಿ ಕುಟುಂಬ ಸೇರಿ ಒಟ್ಟು 28 ಕುಟುಂಬಗಳಿಗೆ ವಿದ್ಯುತ್ ಭಾಗ್ಯ ಲಭಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಿವಾಸಿಗಳು ನೆಲೆಸಿರುವ ಅರಣ್ಯ ಪ್ರದೇಶದ ವಸತಿ ಪ್ರದೇಶಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತ ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ, ವಿದ್ಯುತ್ ಮಾರ್ಗ ಅಳವಡಿಕೆಗೆ ಅರಣ್ಯ ಭೂಮಿ ಪರಿವರ್ತನೆಗಾಗಿ ಪರಿವೇಶ್ ಪೋರ್ಟಲ್ ನಲ್ಲಿ ಅರ್ಜಿ ಹಾಕಿಸಿ, ಅನುಮತಿ ಪಡೆಯಲು ಕ್ರಮ ವಹಿಸಿದ್ದರು. ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದರು.

ಈ ಬಗ್ಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರವರು ಅನುಮತಿಗಾಗಿ ಹೆಚ್ಚಿನ ಮುತುವರ್ಜಿ ಸಹಕರಿಸಿದಕ್ಕಾಗಿ ಸುಲ್ಕೇರಿಮೊಗ್ರು ಗ್ರಾಮದ ಪಂಜಾಲ, ಮಾಳಿಗೆ ಬೈಲಿನ ನಿವಾಸಿಗಳು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರವರಿಗೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೆಡಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಮಿತ್ತಮರ್, ಮಾಜಿ ಪಂಚಾಯತ್ ಸದಸ್ಯ ಸತೀಶ್ ಎಸ್. ಎಂ. ಅವರಿಗೆ ಮಾಳಿಗೆ ಬೈಲಿನಲ್ಲಿ ತುಂಗಪ್ಪ ಮಲೆಕುಡಿಯ ಮನೆಯಲ್ಲಿ ನಡೆದ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಪಂಚಾಯತ್ ಸದಸ್ಯ ಪ್ರಶಾಂತ್ ವೇಗಸ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಪಿಂಟೋ, ಕೆಡಿಪಿ ಸದಸ್ಯ ಸುನಿಲ್ ಜೈನ್, ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಚಿದಾನಂದ ಇಂಚರ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ವಿನುಷ ಪ್ರಕಾಶ್, ಪ್ರಮುಖರಾದ ಕುಶಾಲಪ್ಪ ಗೌಡ, ಕೃಷ್ಣಪ್ಪ ಪೂಜಾರಿ ಶಿರ್ಲಾಲ್, ನಾರಾಯಣ ಪೂಜಾರಿ, ಸುಂದರ ಪೂಜಾರಿ ಕೆಡೆಲು, ಸಂತೋಷ್ ಎಂ.ಕೆ. ಕೇಡೆಲು, ಆನಂದ ಎ೦.ಕೆ., ಜಯಂತ ಎಂ.ಕೆ., ಸುಭಾಷ್ ಎಮ್. ಕೆ, ಪುರಂದರ, ಸದಾನಂದ ಆಚಾರ್ಯ, ಸದಾನಂದ ಪೂಜಾರಿ ಮಾಲಿಗೆ, ಹೆರಾಲ್ಡ್ ಪಿಂಟೋ, ಅಶೋಕ್ ಸುವರ್ಣ, ವೆಂಕಪ್ಪ ಮಲೆಕುಡಿಯ, ಶಿವಪ್ಪ ಮಲೆಕೊಡಿಯ, ಸದಾನಂದ ಮಲೆಕುಡಿಯ, ಸುರೇಶ್ ಪೂಜಾರಿ, ವಿಶ್ವನಾಥ್ ಪೂಜಾರಿ, ಲೋಕಯ್ಯ ಪೂಜಾರಿ, ಪ್ರವೀಣ್ ಎಂ.ಕೆ., ಅಮ್ಮಾಜಿ ಎಂ.ಕೆ., ಬಾಬು ಪೂಜಾರಿ ಪಂಜಲ, ದರ್ಣಪ್ಪ ಪೂಜಾರಿ ದೋರಿಂಜ, ವೀರೇಂದ್ರ ಕುಮಾರ್ ಜೈನ್ ನಾಗರ, ಪುಷ್ಪರಾಜ್ ನಾವುರ ರವಿಬಂಗೇರ ಪಿಲ್ಯ ಹಾಗೂ ಪ್ರಮುಖರು ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here