






ಮಚ್ಚಿನ: ಕೋರಬೆಟ್ಟು ಸುಧೀರ್ ಶೆಟ್ಟಿ ಅವರ ಗುಡ್ಡಕ್ಕೆ ಬೆಂಕಿ ತಗುಲಿ ಮರ ಗಿಡಗಳು ಸುಟ್ಟ ಘಟನೆ ಡಿ.23ರಂದು ಬೆಳಗಿನ ಜಾವ ನಡೆದಿದೆ. ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು.



ಎಂ.ಆರ್.ಪಿ.ಎಲ್. ಪೈಪ್ ಲೈನ್ ಹಾದು ಹೋದ ಈ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಂ.ಆರ್.ಪಿ.ಎಲ್.ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
✍️ಹರ್ಷ ಬಳ್ಳಮಂಜ









