






ಉಜಿರೆ: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ)ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಅ. 11ರಿಂದ ಪ್ರತಿ ರಾತ್ರಿ ವಿಶೇಷ ರಂಗ ಪೂಜೆ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಅ 14ರಂದು ಸಂಜೆ ಉಜಿರೆ ರಾಮನಗರದ ಶ್ರೀ ರಾಮ ಭಜನಾ ಮಂದಿರದ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು.



ನರಸಿಂಹ ನಾಯಕ್, ಮಂಜುನಾಥ ಕಾಮತ್ ಮತ್ತಿತರರು ಭಜನಾ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು.









