



ಸಾವ್ಯ: ಗ್ರಾಮದ ಕಡಪೊಟ್ಟು ಅನುರಾಧ ನಿವಾಸ ಗುರಿಕಾರ ದಿ. ಶಿವಣ್ಣ ಪೂಜಾರಿಯವರ ಪತ್ನಿ ರಾಧಾ (72 ವರ್ಷ) ಹೃದಯಾಘಾತದಿಂದ ಡಿ. 14ರಂದು ನಿಧನರಾದರು. ಮೃತರು ಮಕ್ಕಳಾದ ಸುರೇಶ್ ಕೆ., ರಮೇಶ್, ಗಣೇಶ್, ಶುಭಕರ, ವಿಮಲಾ, ರೇವತಿ, ಸತೀಶ್ ಮತ್ತು ದಿನೇಶ್ ಅವರನ್ನು ಅಗಲಿದ್ದಾರೆ.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಜಿ.ಪ. ಮಾಜಿ ಉಪಾಧ್ಯಕ್ಷ ಧರಣೇ0ದ್ರ ಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಪೆರಾಡಿ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್ ಕಲ್ಲಾಪು, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ. ಕೆ. ಪ್ರಸಾದ್, ವಕೀಲ ನವೀನ್ ಕುಮಾರ್ ಶೆಟ್ಟಿ, ಅಂಡಿಂಜೆ
ಪಿಡಿಓ ರಾಘವೇಂದ್ರ ಪಾಟೀಲ್, ಪಂಚಾಯತ್ ಸದಸ್ಯರು,ಕುಟುಂಬಸ್ಥರು ಇನ್ನಿತರರು ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.









