



ಮಡಂತ್ಯಾರು: ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರವು ದ. ಕ. ಜಿ. ಪ. ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪಾಂಡವರಕಲ್ಲಿನಲ್ಲಿ ಡಿ. 13ರಂದು ಆರಂಭಗೊಂಡಿತು.
ವಾರ್ಷಿಕ ವಿಶೇಷ ಶಿಬಿರವನ್ನು ಗ್ರಾಮ ಪಂಚಾಯತ್ ಸದಸ್ಯ ಡೀಕಯ್ಯ ಬಂಗೇರ ಉದ್ಘಾಟಿಸಿ ಶಿಬಿರವು ವಿದ್ಯಾರ್ಥಿಗಳಲ್ಲಿ ಹೊಸತನವನ್ನು ಕಲಿಸಲು ಪ್ರೇರಣಾದಾಯಕವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಸಂಚಾಲಕ ರೇ. ಡಾ. ಸ್ಟ್ಯಾನಿ ಗೋವಿಯಸ್ ಶುಭಾಶಿರ್ವಾದ ನೀಡಿ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ಆತ್ಮಸ್ಥೈಯ ಮತ್ತು ಅವಕಾಶ ನೀಡಲು ಪೂರಕ ಎಂದು ನುಡಿದರು.



ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಅಲೆಕ್ಸ್ ಐವನ್ ಸಿಕ್ವೇರರವರು ಮಾತನಾಡಿ ಸ್ವಯಂ ಸೇವಕ – ಸೇವಕೀಯರಿಗೆ ಶಿಬಿರದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಬಡಗಕಜೆಕಾರು ಗ್ರಾ. ಪಂ .ಸದಸ್ಯೆ ಸಮೀರ, ಪಾಂಡವರಕಲ್ಲು ದ. ಕ. ಜಿ. ಉ. ಹಿ. ಪ್ರಾ. ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಜೇಂಕ್ಯಾರು, ದೈಹಿಕ ಶಿಕ್ಷಕ ಬಾಲಕೃಷ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಮಿತ್ತೊಟ್ಟು, ಶಾಲಾ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಯಾಕುಬ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಾಧವ ಪಟ್ರಾಡಿ, ಸದಸ್ಯ ಪದ್ಮನಾಭ, ಕಜೆಕಾರು ಪ್ರಾ. ಕೃ. ಸ. ಸಂಘದ ನಿರ್ದೇಶಕ ಯಶವಂತ ಕೊಡ್ಯೇಲು, ಯೋಜನಾಧಿಕಾರಿ ದಿವ್ಯ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಯೋಜನಾಧಿಕಾರಿ ಪ್ರಶಾಂತ್ ಎಂ. ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಸ್ವಯಂಸೇವಕಿಯರಾ ರೂಪಶ್ರೀ ನೆರವೇರಿಸಿದರು. ಹಾಗೂ ಶಮಿತರವರು ವಂದಿಸಿದರು.









