



ಕೊಕ್ಕಡ: ಆರೋಗ್ಯವೇ ಭಾಗ್ಯ ಎಂದು ಹೇಳುವ ಇಂದಿನ ದಿನಗಳಲ್ಲಿ ಜನರು ಒಂದಲ್ಲ ಒಂದು ರೀತಿಯಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದು ಸರ್ವಸಾಮಾನ್ಯವಾಗಿದೆ. ಇದಕ್ಕೆ ಕಾರಣ ಇಂದಿನ ಆಹಾರ ಸೇವನೆ, ವ್ಯಾಯಾಮ ಇಲ್ಲದಿರುವುದು, ಹಾಗೂ ಅಧಿಕ ಒತ್ತಡದ ಕೆಲಸ ಮತ್ತು ಮಾನಸಿಕ ಸ್ಥಿತಿಯಲ್ಲಿ ಆಗುತ್ತಿರುವ ಏರುಪೇರು ಆಗಿದೆ. ಗ್ರಾಮೀಣ ಪ್ರದೇಶದ ಜನರು ಆರೋಗ್ಯ ಸಮಸ್ಯೆ ಬಂದಾಗ ಹತ್ತಿರದ ವೈದ್ಯರನ್ನೇ ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನೇ ಕೇಳಿ ಮುಂದುವರಿಯುತ್ತಾರೆ. ಹಾಗೆಯೇ ಕೊಕ್ಕಡ ಭಾಗದ ಜನಪ್ರಿಯ ವೈದ್ಯರಿಂದ ಜನಾನುರಾಗಿರುವ ಡಾ.ಬಿ ಮೋಹನ್ ದಾಸ್ ಗೌಡ ಅವರು ಕಳೆದ 60 ವರ್ಷಗಳಿಂದ ಗ್ರಾಮೀಣ ಭಾಗದ ಜನರ ಆರೋಗ್ಯ ಸಮಸ್ಯೆ ಬಗ್ಗೆ ಸಲಹೆ ನೀಡುತ್ತಾ, ಚಿಕಿತ್ಸೆ ನೀಡುತ್ತಾ ಶಸ್ತ್ರ ಕಂಡುಬಂದಲ್ಲಿ ಅವರನ್ನು ಪುತ್ತೂರು ಮಂಗಳೂರಿಗೆ ಕರೆದುಕೊಂಡು ಹೋಗು ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಜನರ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಇವರ ಸೇವೆಯು ಶ್ಲಾಘನೀಯ. ವೈದ್ಯಕೀಯ ಸೇವೆಯನ್ನು ದೇವರ ಸೇವೆ ಎಂದೆ ನಂಬಿ ಗ್ರಾಮೀಣ ಜನರ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿರುವರು. ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವರಾಮ ಶಿಶಿಲ ನುಡಿದರು.

ಕೊಕ್ಕಡದ ಕಾವು ತ್ರಿಗುಣೇಶ್ವರಿ ಸಭಾಂಗಣದಲ್ಲಿ ರವಿವಾರ ನಡೆದ ಡಾ.ಬಿ ಮೋಹನ್ ದಾಸ್ ಗೌಡ ಅವರು 90ನೇ ವರ್ಷದ ನವತಿ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡುತ್ತಾ ತಿಳಿಸಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಾಲಿಬಾಲ್ ಫಡರೇಶನ್ ಆಫ್ ಇಂಡಿಯಾದ ರಾಷ್ಟ್ರೀಯ ವಾಲಿಬಾಲ್ ತೀರ್ಪುಗಾರರಾದ ಕಮಲಾಕ್ಷ ಕಲ್ಲಬೆಟ್ಟು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾಂತೀಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾೈಸ್, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ದಿವಾ ಕೊಕ್ಕಡ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಪೂವಾಜೆ, ಅಂತರಾಷ್ಟ್ರೀಯ ಕ್ರೀಡಾಪಟು ಕುಶಾಲಪ್ಪ ಗೌಡ ಪಂಜ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ವಿಶ್ವನಾಥ ಗೌಡ ನಡುತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಬಿ ಮೋಹನ್ ದಾಸ್ ಗೌಡ ದಂಪತಿಯನ್ನು ಬೆಳ್ತಂಗಡಿ ತಾಲೂಕು ಶಾಸಕ ಹರೀಶ್ ಪೂಂಜಾ, ಉದ್ಯಮಿ, ಸಮಾಜ ಸೇವಕ ಕಿರಣ್ ಚಂದ್ರ ಪುಷ್ಪಗಿರಿ, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್, ಕೊಕ್ಕಡ ರಿಕ್ಷಾ ಚಾಲಕ ಮಾಲಕರ ಸಂಘ, ಕೊಕ್ಕಡ ಒಕ್ಕಲಿಗ ಗೌಡ ಸಂಘದ ಪದಾಧಿಕಾರಿಗಳು, ಗುಡ್ರಮಲ್ಲೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಡಾಕ್ಟರ್ ಅವರ ಮಕ್ಕಳು, ಸೊಸೆ, ಮೊಮ್ಮಕ್ಕಳು, ಅಳಿಯಂದಿರು, ವೇದಿಕೆಯ ಗಣ್ಯರು, ಊರ ಹಾಗೂ ಪರಊರ ಮಹನೀಯರು, ಅವರ ಅಭಿಮಾನಿಗಳು, ಗ್ರಾಮಸ್ಥರು, ಗೌರವಿಸಿ ಆಶೀರ್ವಾದ ಪಡೆದರು.

ಡಾ.ತಾರ ಸ್ವಾಗತಿಸಿದರು. ಡಾಕ್ಟರ್ ಅವರ ಅಳಿಯಂದಿರಾದ ನಿವೃತ್ತ ಮುಖ್ಯಶಿಕ್ಷಕ ವಿಜಯಕುಮಾರ್ ನಡುತೋಟ, ಉದ್ಯಮಿ ಸುಂದರ ಗೌಡ ಕೊಕ್ಕಡ, ಪ್ರಗತಿಪರ ಕೃಷಿಕ ಅಚ್ಚುತಗೌಡ ಕಾರ್ಯಕ್ರಮ ಸಂಘಟಿಸಿದರು. ಡಾಕ್ಟರ್ ಅವರ ಮೊಮ್ಮಕ್ಕಳಾದ ಪಂಚಮಿ, ಶ್ರದ್ಧ, ಶೈಲಾ, ಸನ್ನಿಧಿ, ಅರ್ಪಣಾ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನ್ ಕಡೆಂಬಿಕಾಡು ವಂದಿಸಿದರು.









