



ಬೆಳ್ತಂಗಡಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನೊಳಗೊಂಡ ಜೆಸಿಐ ಭಾರತದ ವಲಯ 15 ರ 2026 ನೇ ಸಾಲಿನ ಅಭಿವೃದ್ಧಿ ಮತ್ತು ಬೆಳವಣಿಗೆ (G&D) ವಿಭಾಗದ ವಲಯ ನಿರ್ದೇಶಕರಾಗಿ ರಂಜಿತ್ ಹೆಚ್. ಡಿ. ಬಳಂಜ ಆಯ್ಕೆಗೊಂಡರು.
2015 ರಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮುಖಾಂತರ ಜೆಸಿಐ ಸಂಸ್ಥೆಗೆ ಪಾದಾರ್ಪಣೆಗೊಂಡು, 2024ನೇ ವರ್ಷ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಯಶಸ್ವಿ ಅಧ್ಯಕ್ಷರಾಗಿ ವರ್ಷಪೂರ್ತಿ ಹಲವಾರು ಕಾರ್ಯಕ್ರಮ ಗಳೊಂದಿಗೆ ಸಮಾಜಮುಖಿಯಾಗಿ ತೊಡಗಿಸಿಕೊಂಡು ವಲಯ ಸಮ್ಮೇಳನ ದಲ್ಲಿ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿಯನ್ನು ಪಡೆದುಕೊಂಡವರು. ಬಳಂಜ ಶಾಲಾ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜೆಸಿಐ ಭಾರತದ ರಾಷ್ಟ್ರಧ್ಯಕ್ಷರನ್ನು ಬಳಂಜ ಶಾಲೆಗೆ ಬರಮಾಡಿಕೊಂಡು ಸುಮಾರು ಒಂದು ಲಕ್ಷ ವೆಚ್ಚದ ಕೊಡುಗೆಗಳನ್ನು ಬಳಂಜ ಶಾಲೆ ಹಾಗೂ ಇತರ ಸಂಸ್ಥೆ ಗಳಿಗೆ ನೀಡಿರುತ್ತಾರೆ.


ಈ ವರ್ಷ ವಲಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ 11 ಘಟಕಗಳ ಮೇಲುಸ್ತುವಾರಿ ಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಒಂದು ಹೊಸ ಘಟಕ ವನ್ನು ಕೂಡ ನೀಡುವಲ್ಲಿ ಯಶಸ್ವಿಯಾಗಿದ್ದರೆ.
ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಕಳೆದ 13 ವರ್ಷಗಳಿಂದ ಮೂಡುಬಿದ್ರಿಯ ಮೈಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.









