ಗುರುವಾಯನಕೆರೆ: ಪಿಲಿಚಾಮುಂಡಿಕಲ್ಲಿನಲ್ಲಿ ದೊಂಪದ ಬಲಿ ಉತ್ಸವ

0

ಗುರುವಾಯನಕೆರೆ: ಪಿಲಿಚಾಮುಂಡಿ ಕಲ್ಲಿನಲ್ಲಿ ದೊಂಪದಬಲಿ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಕಾರಣಿಕ ದೈವ ಶ್ರೀ ಪಿಲಿಚಾಮುಂಡಿ ದೈವದ ದೊಂಪದ ಬಲಿ ಉತ್ಸವವು ಡಿ.13ರಂದು ಸಂಭ್ರಮ ಸಡಗರದಿಂದ ನಡೆಯಿತು.

ಸಂಜೆ 7ಕ್ಕೆ ಪಾಡ್ಯಾರುಬೀಡು ಮನೆಯಿಂದ ಭವ್ಯವಾದ ಮೆರವಣಿಗೆಯಲ್ಲಿ ದೈವದ ಭಂಡಾರವನ್ನು ಪಿಲಿಚಾಮುಂಡಿ ಕಲ್ಲಿಗೆ ತರಲಾಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 10ರಿಂದ ರಾತ್ರಿ 2 ಗಂಟೆಯ ತನಕ ಕಾರಣಿಕ ದೈವ ಶ್ರೀ ಪಿಲಿಚಾಮುಂಡಿ ದೈವದ ದೊಂಪದಬಲಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಊರು ಹಾಗೂ ಪರವೂರಿನಿಂದ ಬೃಹತ್‌ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಪಿಲಿಚಾಮುಂಡಿ ದೈವದ ಗಂಧಪ್ರಸಾದವನ್ನು ಸ್ವೀಕರಿಸಿ ಧನ್ಯತೆಯನ್ನು ಪಡೆದರು. ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here