



ಬೆಳ್ತಂಗಡಿ: ಕನ್ಯಾಡಿಯ ಮಾತೃಶ್ರೀ ನಿವಾಸದಲ್ಲಿ ಯಕ್ಷಭಾರತಿ ಟ್ರಸ್ಟಿ, ಕಲಾವಿದ ಶಶಿಧರ ಕನ್ಯಾಡಿ ಅವರ ಷಷ್ಟ್ಯಬ್ಧ ನಿಮಿತ್ತ ಯಕ್ಷಭಾರತಿ ಕನ್ಯಾಡಿ ತಂಡದಿಂದ ಪ್ರೊ. ಪವನ್ ಕಿರಣಕೆರೆ ವಿರಚಿತ ಶ್ರೀಕೃಷ್ಣ ತುಲಾಭಾರ ತಾಳಮದ್ದಳೆ ಜರಗಿತು.
ಭಾಗವತರಾಗಿ ಮಹೇಶ ಕನ್ಯಾಡಿ, ಹಿಮ್ಮೇಳದಲ್ಲಿ ಜಗನ್ನಿವಾಸ ರಾವ್ ಪುತ್ತೂರು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಶ್ರೀ ಕೃಷ್ಣನಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ಸತ್ಯಭಾಮೆಯಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ನಾರದನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ಬಲರಾಮನಾಗಿ ರವೀಂದ್ರ ಶೆಟ್ಟಿ ಬಳೆಂಜ, ರುಕ್ಮಿಣಿಯಾಗಿ ವೈಷ್ಣವಿ ಜೆ. ರಾವ್ ಪಾತ್ರಗಳನ್ನು ನಿರ್ವಹಿಸಿದರು.


ಅಭಿನಂದನೆ: ಅರುವತ್ತು ಸಂವತ್ಸರ ಪೂರೈಸಿದ ಶಶಿಧರ. ಕೆ, ಪತ್ನಿ ಮಮತಾ ಅವರನ್ನು ಯಕ್ಷ ಭಾರತಿ ವತಿಯಿಂದ ಗೌರವಿಸಲಾಯಿತು.ಸಂಸ್ಥೆಯ ಉಪಾಧ್ಯಕ್ಷ ಹರಿದಾಸ ಗಾಂಭೀರ ಅಭಿನಂದಿಸಿ, ಸಂಚಾಲಕ ಮಹೇಶ ಕನ್ಯಾಡಿ ಅಭಿವಂದನ ಪತ್ರ ವಾಚಿಸಿದರು. ಶಶಿಧರ ಕನ್ಯಾಡಿ ನನ್ನ ಕಲಾಯಾನದಲ್ಲಿ ಸಹಕರಿಸಿದ, ಪ್ರೋತ್ಸಾಹಿಸಿದವರನ್ನು ನೆನಪಿಸಿ ಕೃತಜ್ಞತೆಗಳನ್ನು ಅರ್ಪಿಸಿದರು.
ಯಕ್ಷ ಭಾರತಿ ಟ್ರಸ್ಟಿಗಳಾದ ಕುಸುಮಾಕರ ಕುತ್ತೋಡಿ,ಹರೀಶ ಕೊಳ್ತಿಗೆ, ಯಶೋದರ ಇಂದ್ರ ಸಹಕರಿಸಿದರು.ಪುತ್ರರಾದ ಕಶ್ಯಪ್, ಕೌಶಲ್, ಕೌಸ್ತುಭ ಉಪಸ್ಥಿತರಿದ್ದರು. ವಿಘ್ನೇಶ್ವರ ಪ್ರಸಾದ್ ಮತ್ತು ವಿಶ್ವೇಶ್ವರ ಪ್ರಸಾದ್ ಕಲಾವಿದರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಯಕ್ಷ ಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.









