



ಬೆಳ್ತಂಗಡಿ: ಪುಂಜಾಲಕಟ್ಟೆ ಪುರಿಯ ರಸ್ತೆಯ ಎಲೆಕ್ಟ್ರಿಷಿಯನ್ ನೋಯೆಲ್ ಜೋಸೆಫ್ ಪಿಂಟೋ (38ವ) ಮಡಂತ್ಯಾರಿನಲ್ಲಿ ನಡೆದ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ಅಪಘಾತದಲ್ಲಿ ಡಿ. 14ರಂದು ನಿಧನರಾಗಿದ್ದಾರೆ.


ಘಟನೆಯ ವಿವರ: ಮೃತರು ಮನೆಯಲ್ಲಿ ಕೆಲಸದವರಿಗೆ ಕಾಫಿ ತಿಂಡಿ ತರಲು ಮಡಂತ್ಯಾರು ಆಗಮಿಸುವ ವೇಳೆ ಕೆ.ಎಸ್.ಆರ್.ಟಿ. ಸಿ ಬಸ್, ಆಟೋ ರಿಕ್ಷಾ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದು ಎದೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ವೇಣೂರು ಮೆಸ್ಕಾಂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಗತಿಪರ ಕೃಷಿಕರು ಕೂಡ ಆಗಿದ್ದರು.
ಮೃತರು ತಾಯಿ ಫ್ಲೋರಿನ ಪಿಂಟೋ, ಇಬ್ಬರು ಸಹೋದರರು, ಸಹೋದರಿಯನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಡಿ. 15ರಂದು ಸಂಜೆ 4ಗಂಟೆಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ನಡೆಯಲಿದೆ.









