



ಬೆಳ್ತಂಗಡಿ: ಕಳೆದು ಹೋದಂತಹ ಸುಮಾರು ರೂ.1.80ಲಕ್ಷ ಮೌಲ್ಯದ ಚಿನ್ನದ ಬ್ರೇಸ್ಲಿಟ್ ಅನ್ನು ನಡ ಗ್ರಾಮದ ಮಂಜೊಟ್ಟಿ ಚಿಕನ್ ಸೆಂಟರ್ ಮಾಲಕ ಶ್ರೀಧರ್ ಶೆಟ್ಟಿ ಅವರು ಸಂಬಂಧಪಟ್ಟವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.


ಘಟನೆ ವಿವರ: ಬೆಳ್ತಂಗಡಿ ಪೇಟೆಗೆ ಹೋದ ಸಂದರ್ಭದಲ್ಲಿ ಯಾವುದೋ ಹೊಳೆಯುತ್ತಿದ್ದ ಆಭರಣವನ್ನು ಕಂಡು ಮನೆಗೆ ತಂದು ಪರಿಶೀಲಿಸಲು ಹೇಳಿದಾಗ ಇದು ಅಸಲಿ ಚಿನ್ನದ ಆಭರಣವೆಂದು ಗೊತ್ತಾಗಿ ತನ್ನ ಮನೆಯವರಲ್ಲಿ ಈ ವಿಚಾರವನ್ನು ಫೋಟೋ ಸಮೇತ ವಾಟ್ಸಪ್ ಗ್ರೂಪ್ ನಲ್ಲಿ ಹಾಕಲು ಹೇಳಿದರು.
ಎರಡು ದಿನಗಳಿಂದ ಸರಿಸುಮಾರು 85ಕ್ಕೂ ಹೆಚ್ಚು ಜನರು ಫೋನ್ ಕರೆ ಮಾಡಿ ಇದರ ಬಗ್ಗೆ ವಿಚಾರಣೆ ಮಾಡಿದರೂ, ನಿಜವಾಗಿಯೂ ಯಾರು ಕಳೆದುಕೊಂಡಿದ್ದಾರೆ ಅವರಿಗೆ ನ್ಯಾಯಯುತವಾಗಿ ಸಿಗಬೇಕು ಎಂಬ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಸಹಕಾರವನ್ನು ಪಡೆದು ಕಳೆದುಕೊಂಡಂತಹ ಪ್ರಕಾಶ್ ಬಳಂಜ ಅವರಿಗೆ ಹಸ್ತಾಂತರಿಸಲಾಯಿತು.









