



ಅರಸಿನಮಕ್ಕಿ: ಸರಕಾರಿ ಪ್ರೌಢಶಾಲೆಯ ಹಳೆಯ ಶಾಲಾ ಕಟ್ಟದ ದುರಸ್ತಿ ಕಾರ್ಯವು ಹಳೆಯ ವಿದ್ಯಾರ್ಥಿಗಳ ನೆರವಿನಿಂದ ನಡೆಯುತ್ತಿದ್ದೂ ಡಿ.13ರಂದು ಹಳೆಯ, ಹಿರಿಯ ವಿದ್ಯಾರ್ಥಿಯಾದ ಶಿಶಿಲದ ಮುಕುಂದ ದಾಮ್ಲೆ ಯವರು ತಮ್ಮ ಸಾಫ್ರಾನ್ ಟೆಕ್ನಾಲಜಿ ಸಾಫ್ಟ್ ವೇರ್ ಸಂಸ್ಥೆಯ ವೃತ್ತಿ ಸ್ನೇಹಿತರ ತಂಡದೊಂದಿಗೆ ಈ ಕಟ್ಟಡದ ಶಾಲಾ ಕಿಟಕಿ ಬಾಗಿಲುಗಳಿಗೆ ಬಣ್ಣವನ್ನು ಬಳಿಯುವ ಮೂಲಕ ಹೊಸ ಮೆರಗನ್ನು ನೀಡಿದರು.
ಸರಕಾರಿ ಶಾಲೆಗಳ ಉಳಿವಿನ ಮಹದಾಸೆಯನ್ನು ಹೊತ್ತ ಈ ಟೆಕ್ಕಿಗಳ ತಂಡವು ಬೆಂಗಳೂರಿನಿಂದ ಅರಸಿನಮಕ್ಕಿಗೆ ಬಂದು ಶ್ರಮದಾನ ಮಾಡಿರುವುದು ಶ್ಲಾಘನೀಯ ಹಾಗೂ ಮಾದರಿಯಾಗಿದೆ.
ಮುಕುಂದ ದಾಮ್ಲೆರವರು ಪ್ರಸ್ತುತ ದಿನಗಳಲ್ಲಿ ಮಕ್ಕಳ ಕಲಿಕೆಗೆ ಅವಶ್ಯಕವಾದ ನಾಲ್ಕು ಕಂಪ್ಯೂಟರ್ ಡೆಸ್ಕ್ ಟಾಪ್ ಗಳನ್ನು ಈ ಶಾಲೆಗೆ ನೀಡಿರುವುದು ಕಲಿಕೆಯ ವಾತಾವರಣ ಇನ್ನೂ ಸುಂದರಗೊಳಿಸುವಲ್ಲಿ ಸಹಕರಿಸಿದ್ದಾರೆ.


ಡಿ. 13ರಂದು ಮಧ್ಯಾನ ಖ್ಯಾತ ಅಂತರಾಷ್ಟ್ರೀಯ ಕಲಾವಿದ, ಪರಿಸರ ಪ್ರೇಮಿ ಮಂಗಳೂರಿನ ಸಹ್ಯಾದ್ರಿ ಸಂಚಯದ ಸಂಚಾಲಕರಾದ ದಿನೇಶ್ ಹೊಳ್ಳ ರವರು ಪಶ್ಚಿಮ ಘಟ್ಟಗಳ ಉಳಿವು ಕುರಿತು ಜಾಗೃತಿ ಮೂಡಿಸುವ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು ಪಶ್ಚಿಮ ಘಟ್ಟಗಳ ಉಳಿವಿನ ಅವಶ್ಯಕತೆ ವಿದ್ಯಾರ್ಥಿಗಳ ಮನಮುಟ್ಟುವಲ್ಲಿ ಈ ಕಾರ್ಯಕ್ರಮ ಮಹತ್ತರ ಪರಿಣಾಮಕಾರಿಯಾಗಿತ್ತು.
ತದನಂತರ ವಿದ್ಯಾರ್ಥಿಗಳ ಬರವಣಿಗೆಯನ್ನು ಅಂದಗೊಳಿಸುವ ಅಕ್ಷರ ವಿನ್ಯಾಸ ಕಾರ್ಯಾಗಾರವನ್ನು ದಿನೇಶ್ ಹೊಳ್ಳರವರು ನಡೆಸಿಕೊಟ್ಟರು ಇದರಿಂದಾಗಿ ಉತ್ತಮ ಕೈಬರಹ ಹಾಗೂ ಕಲಾಕೃತಿಗಳನ್ನು ಸುಲಭವಾಗಿ ಕಲಿಯುವ ನೂತನ ವಿಧಾನ ವಿದ್ಯಾರ್ಥಿಗಳು ಕಲಿಯುವಂತಾಯಿತು. ಇದು ವಿದ್ಯಾರ್ಥಿಗಳ ಮೌಲ್ಯಯುತ ಕಲಿಕೆಗೆ ಅಗತ್ಯವಾದ ಕಾರ್ಯಕ್ರಮವಾಗಿತ್ತು.
ಹಿರಿಯ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷರಾದ ವಾಮನ ತಾಮನ್ಕರ್ ಶ್ರೀರಂಗ ದಾಮ್ಲೆ ಅವಿನಾಶ್ ಭಿಡೆ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಮಂಜುಳಾರವರು ಹಾಗೂ ಶಿಕ್ಷಕವೃಂದ ಈ ಕಾರ್ಯಕ್ರಮದಲ್ಲಿದ್ದು ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು.
ಶಾಲಾ ಶಿಕ್ಷಕಿಯರಾದ ಮಂಜುಳಾ, ಮೀನಾಕ್ಷಿ, ಚೇತನಾ ಬಿ. ಎಮ್., ಚೇತನಾ ಕುಮಾರಿ, ದಿವ್ಯ ಬಿ. ಸೀ., ಸುಧೀಂದ್ರ ಉಪಸ್ಥಿತರಿದ್ದರು.









