



ಬೆಳ್ತಂಗಡಿ: ಸಿರಿಯನ್ ಕ್ಯಾಥೋಲಿಕ್ ವಿವಿಧೋದ್ದೇಶ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯು ಸಿರೋಮಲಬಾರ್ ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೇರಿಲ್ ಅವರನ್ನು ಮತ್ತು ವಿಶ್ರಾಂತ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಯಿ ಅವರನ್ನು ಅವರ ನಿವಾಸದಲ್ಲಿ ಡಿ.13ರಂದು ಭೇಟಿ ಮಾಡಿ ಕ್ರಿಸ್ಮಸ್ ಹಬ್ಬದ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.
ಸಂಘದ ಬಗ್ಗೆ ಪರಿಚಯ ನೀಡಿದ ಸಂಘದ ಅಧ್ಯಕ್ಷ ಅನಿಲ್ ಎ.ಜೆ ಯವರು ಸಂಘವು 2010ರಲ್ಲಿ ಸ್ಥಾಪನೆಯಾಗಿ ಕೇವಲ 15 ವರ್ಷಗಳಲ್ಲಿ ಇಂದು ಸುಮಾರು 6500ಕ್ಕೂ ಹೆಚ್ಚು ಗ್ರಾಹಕರ ಯಶಸ್ವೀ ವ್ಯವಹಾರದ ಮೂಲಕ ರೂ.200 ಕೋಟಿಗಳಿಗೂ ಮಿಕ್ಕಿ ವ್ಯವಹಾರ ವಹಿವಾಟನ್ನು ನಡೆಸಿ ಸಾರ್ವಜನಿಕ ವಲಯದಲ್ಲಿ ದೃಡ ವಿಶ್ವಾಸವನ್ನು ಗಳಿಸಿದೆ ಎಂದು ತಿಳಿಸಿದರು. ಬೆಳ್ತಂಗಡಿ, ಕಾರ್ಯತ್ತಡ್ಕ ಮತ್ತು ನೆಲ್ಯಾಡಿಯಲ್ಲಿ ಸಂಘದ ಶಾಖೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಲಾಭದಾಯಕವಾಗಿ ಬೆಳೆಯುತ್ತಿವೆ ಎಂದು ವಿವರಿಸಿದರು.



ಯಾವುದೇ ಜಾತಿ- ಮತ ಭೇದವಿಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಎಲ್ಲಾ ವರ್ಗದ ಜನರಿಗೆ ಸಂಘವು ಹಮ್ಮಿಕೊಳ್ಳುತ್ತಿರುವ ವಿವಿಧ ಆರ್ಥಿಕ, ಸಾಮಾಜಿಕ ಸೇವಾ ಚಟುವಟಿಕೆಗಳ ಸಂಕ್ಷಿಪ್ತ ವಿವರಗಳನ್ನು ಧರ್ಮಾಧ್ಯಕ್ಷರಿಗೆ ನೀಡಿ ಸಂಘದ ಪ್ರತಿಯೊಬ್ಬ ನಿರ್ದೇಶಕರ ಮತ್ತು ಸಿಬ್ಬಂದಿಗಳ ಪರಿಚಯವನ್ನು ಅಧ್ಯಕ್ಷರು ಮಾಡಿಕೊಟ್ಟರು.

ಉಪಾಧ್ಯಕ್ಷ ಜಾರ್ಜ್ ಎಮ್.ವಿ, ನಿರ್ದೇಶಕರಾದ ಸೆಭಾಸ್ಟೀನ್ ವಿ.ಟಿ, ಅಂದಾನಿ ಕೆ.ಡಿ, ಜೈಸನ್ ಪಿ.ಎಸ್, ಬಾಬು ತೋಮಸ್, ಸೆಭಾಸ್ಟೀನ್ ವಿ.ಪಿ, ಬಿಜು ಪಿ.ಪಿ, ಚಾಕೋ ಎನ್.ಕೆ, ಪಿ.ಟಿ. ಸೆಭಾಸ್ಟೀನ್, ಅಜಯ್ ಕೆ.ಎ, ಸೋಫಿ ಜೋಸೆಫ್, ಲಾಲಿ ಮಾಣಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಪಿ.ಎ, ಶಾಖಾ ವ್ಯವಸ್ಥಾಪಕರಾದ ರೇಷ್ಮಾ ಅಬ್ರಾಹಂ, ಮ್ಯಾಥ್ಯು ಕೆ.ಕೆ, ಸುಜಾ ಜೇಮ್ಸ್, ಸಿಬ್ಬಂದಿಗಳಾದ ವಿಲ್ಸನ್ ಡಿಸೋಜ, ಸುಭೀಕ್ಷ, ಸ್ಟೇನಿ ಎನ್.ಎಸ್, ಅಲಿನಾ ಎ.ಜೆ, ಸುಸ್ಮಿತಾ ಟಿ.ಎಸ್, ಮಿನಿ ಮೋಳ್, ಕಾವ್ಯ ಎಂ.ಜೆ, ಡಾನಿಯಾ ಜೋಸೆಫ್ ಮತ್ತು ನವ್ಯಶ್ರೀ ಉಪಸ್ಥಿತರಿದ್ದರು. ಧರ್ಮಾಧ್ಯಕ್ಷರು ಎಲ್ಲರನ್ನು ಹರಸಿ ಸಿರಿಯನ್ ಕ್ಯಾಥೋಲಿಕ್ ಸಂಸ್ಥೆಯು ಮುಂದೆಯೂ ಉನ್ನತ ಮಟ್ಟದಲ್ಲಿ ಅಭಿವೃದ್ದಿ ಹೊಂದಲಿ ಎಂದು ಶುಭ ಹಾರೈಸಿದರು.









