




ಬೆಳಾಲು: ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆಯನ್ನು ಊರ ಗೌಡರುಗಳಾದ ರಾಜಪ್ಪ ಗೌಡ ಪುಚ್ಚೆಹಿತ್ತಿಲು ಮತ್ತು ನೋಣಯ್ಯ ಗೌಡ ಕೊಲ್ಲಿಮಾರು ಇವರು ದೀಪ ಬೆಳಗಿಸಿ ಉದ್ಘಾಟಿಸಿ, ಕ್ರೀಡಾಕೂಟದ ಯಶಸ್ವಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕವಿತಾ ಉಮೇಶ್ ಗೌಡ ಮಂಜೊತ್ತು ಕ್ರೀಡೆಯನ್ನು ಕ್ರೀಡಾ ಸ್ಫೂರ್ತಿಯಿಂದ ತೆಗೆದುಕೊಂಡು, ಎಲ್ಲರೂ ಒಗ್ಗಟ್ಟಾಗಿ ಬಾಳಬೇಕೆಂದು ತಿಳಿಸಿದರು.


ಗ್ರಾಮ ಸಮಿತಿಯ ಅಧ್ಯಕ್ಷರಾದ ಧರ್ಮೇಂದ್ರ ಗೌಡ ಪುಚ್ಚೆಹಿತ್ತಿಲು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿಯ ಗೌರವಾಧ್ಯಕ್ಷರಾದ ವಿಜಯ ಗೌಡ ಸೌತೆಗದ್ದೆ, ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಕನ್ನಿಕಾ ಪದ್ಮ ಗೌಡ, ಯುವ ವೇದಿಕೆಯ ಗೌರವಾಧ್ಯಕ್ಷರಾದ ಉಮೇಶ್ ಗೌಡ ಮಂಜೊತ್ತು, ರಾಜ್ಯ ಮಟ್ಟದ ಯೋಗಪಟು ಧನಂಜಯ ಗೌಡ ಹೋಂಪೆಜಾಲು, ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾದ ಲಕ್ಷ್ಮಣ ಗೌಡ ಸೌತೆಗದ್ದೆ, ಯುವ ವೇದಿಕೆಯ ಅಧ್ಯಕ್ಷರಾದ ಸಂಜೀವ ಗೌಡ ಕಾಡಂಡ, ಮಹಿಳಾ ವೇದಿಕೆಯ ಅಧ್ಯಕ್ಷೆ ಲತಾ ಕೇಶವ ಗೌಡ, ತಾಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿ ಲೀಲಾ ಸೌತೆಗದ್ದೆ ಮತ್ತು ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.
ಮಹಿಳಾ ವೇದಿಕೆಯ ಕಾರ್ಯದರ್ಶಿ ಜಯಶ್ರೀ ಮೋಹನ್ ಗೌಡ ನಿರೂಪಿಸಿದ ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿಯ ಕಾರ್ಯದರ್ಶಿ ಶೇಖರ ಗೌಡ ಕೊಲ್ಲಿಮಾರು ಸ್ವಾಗತಿಸಿ, ಯುವ ವೇದಿಕೆಯ ಕಾರ್ಯದರ್ಶಿ ಸುಖೇಶ್ ಗೌಡ ಅರಿಪಾದೆ ಧನ್ಯವಾದವಿತ್ತರು.









