
ನೆರಿಯ: ಜು.25ರಂದು ಮಧ್ಯಾಹ್ನ ಸಮಯದಲ್ಲಿ ಸುರಿದ ಭಾರೀ ಗಾಳಿ, ಮಳೆಗೆ ನೆಕ್ಕರೆಯಲ್ಲಿ ಮನೆಗೆ ಮರ ಬಿದ್ದು ಮಹಿಳೆಗೆ ಗಾಯವಾದ ಬಗ್ಗೆ ವರದಿಯಾದೆ.

ನೆಕ್ಕರೆ ನಿವಾಸಿ ಶ್ರೀಶಾ ಎಂಬವರ ಮನೆಗೆ ಮರ ಬಿದ್ದು ಮನೆಗೆ ಹಾನಿಯಾಗಿದ್ದು, ಮನೆಯಲ್ಲಿ ಇದ್ದ ಅವರ ಪತ್ನಿ ಉಷಾ ಸಣ್ಣ ಪುಟ್ಟ ಗಾಯದಿಂದ ಜೀವಾಪಾಯದಿಂದ ಪಾರಾಗಿದ್ದಾರೆ.
ಗ್ರಾಮ ಪಂಚಾಯತ್ ಪಿಡಿಓ ಸುಮಾ, ಕಾರ್ಯದರ್ಶಿ ಅಜಿತ್, ವಿ.ಎ. ಸಿದ್ದೇಶ್, ಗ್ರಾಮ ಸಹಾಯಕ ಶ್ರೀನೀವಾಸ್, ಗ್ರಾ. ಪಂ. ಸದಸ್ಯರಾದ ದಿನೇಶ್, ಮೊಹಮ್ಮದ್ ಅವರು ಭೇಟಿ ನೀಡಿದ್ದಾರೆ.