




ಪುದುವೆಟ್ಟು: ಗ್ರಾಮದ ಅಡ್ಯಾ ಪರಿಸರದ ನೆರಿಯ ಹೊಳೆಯಲ್ಲಿ ಅ. 31ರಂದು ಬೆಳಗ್ಗೆ ಎರಡು ಕಾಡಾನೆಗಳು ಕಂಡುಬಂದಿದ್ದು ಕೃಷಿಗೆ ಹಾನಿ ಉಂಟುಮಾಡಿರುವ ಘಟನೆ ನಡೆದಿದೆ. ಕಳೆಂಜ ಗ್ರಾಮದ ಮಾಣಿಗೇರಿ ಹಾಗೂ ಕುಲಾಡಿ,ಪುತ್ಯೆ ಇನ್ನೂ ಕೆಲವು ಕಡೆಗಳಲ್ಲಿ ಕಾಡಾನೆ ನಿರಂತರ ಉಪಟಳ ನೀಡುತ್ತಿದ್ದೂ ಅನೇಕ ರೈತರ ಕೃಷಿಯನ್ನು ಕಾಡಾನೆ ನೆಲಸಮಗೊಳಿಸಿದ್ದು ರೈತರು ಕಂಗಾಲಾಗಿದ್ದಾರೆ. ಅ.31ರಂದು ಮುಂಜಾನೆ ಮಾಣಿಗೇರಿ ಹೊಳೆ ದಾಟಿ ಬೊಲ್ಮನಾರ್ ಕಡೆಗೆ ಜಂಟಿ ಸಲಗಗಳು ಸಂಚರಿಸುತ್ತಿರುವುದು ಕಂಡುಬಂದಿದ್ದ ದೃಶ್ಯವು ಸಾರ್ವಜನಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.









