




ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದ ಬ್ಯಾಂಕ್ ಆಫ್ ಬರೋಡ ಎ.ಜಿ.ಎಂ. ಅಮಿತ್ ಶೆಟ್ಟಿ ದಂಪತಿ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಬರಾಯ ಶಾಲು ಹೊದಿಸಿ ಸನ್ಮಾನಿಸಿದರು. ಎ.ಜಿ.ಎಂ. ಅಮಿತ್ ಶೆಟ್ಟಿಯವರು ಮಾತನಾಡಿ ಸಿ.ಎಸ್.ಆರ್. ಫಂಡ್ ಮೂಲಕ ದೇವಳದ ಅಭಿವೃದ್ಧಿ ಕೆಲಸಗಳಲ್ಲಿ ಭಾಗಿಯಾಗುವ ಭರವಸೆ ನೀಡಿದರು. ಶಿಶಿಲ ಬ್ಯಾಂಕ್ ಆಫ್ ಬರೋಡ ಶಾಖೆಯ ಮ್ಯಾನೇಜರ್ ಯೋಗೀಶ್ ಉಪಸ್ಥಿತರಿದ್ದರು.









