


ಬೆಳ್ತಂಗಡಿ: ಬ್ರಹ್ಮ ಶ್ರೀ ನಾರಾಯಣ ಗುರುಗಳ “ಒಂದೇ ಜಾತಿ,ಒಂದೇ ಮತ,ಒಬ್ಬನೇ ದೇವರು” ಎಂಬ ತತ್ವದಡಿಯಲ್ಲಿ “ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ “ ಎಂಬ ದ್ಯೇಯ ವಾಕ್ಯಕ್ಕೆ ಅನುಗುಣವಾಗಿ ಸುಧೀರ್ಘ 64 ವರ್ಷ ಗಳಿಂದ ಸಮಾಜ ಸೇವೆಯಲ್ಲಿ ಮುಂಚೂಣಿ ಯಲ್ಲಿರುವ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ 2025ನೇ ಸಾಲಿನ ಜಿಲ್ಲಾ ಕನ್ನಡರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.1961ರಲ್ಲಿ ಕೇದೆ ದಿ.ಸುಬ್ಬ ಪೂಜಾರಿ ಅವರ ಸ್ಥಾಪಕ ಅಧ್ಯಕ್ಷರಾಗಿ ದಿ.ಕುಂಜೀರ ಯಾನೆ ಸಿದ್ದಪ್ಪ ಪೂಜಾರಿಯವರ ಸ್ಥಾಪಕ ಕಾರ್ಯದರ್ಶಿಯಾಗಿ ಸಮಾಜದ ನಾಯಕರು ಒಟ್ಟು ಸೇರಿ ಪ್ರಾರಂಭವಾದ ಸಂಘ.
ಮಿತ್ತಮಾರು ಬಿರ್ಮಣ ಪೂಜಾರಿಯವರ ಅಧ್ಯಕ್ಷರಾಗಿ ಉಜಿರೆ ಕೆ. ಎ. ನಾರಾಯಣರ ಕಾರ್ಯದರ್ಶಿಯಾಗಿದ್ದ ಕಾಲಾವಧಿಯಲ್ಲಿ ಸಂಘದ ರಿಜಿಸ್ಟ್ರಿಗೊಂಡಿತು. ನಂತರ ಬೆಳ್ತಂಗಡಿ ತಾಲೂಕಿನ ಮಾಜಿ ಶಾಸಕರು,ಸಂಘದ ಗೌರವಾಧ್ಯಕ್ಷರಾದ ದಿ.ಕೆ.ವಸಂತ ಬಂಗೇರರು ಬೆಳ್ತಂಗಡಿಯ ಹೃದಯ ಭಾಗದಲ್ಲಿ ತನಗೆ ಬಂದಂತಹ ನಿವೇಶನವನ್ನು ಸಂಘದ ಹೆಸರಿಗೆ ದಾಖಲಿಸಿ ಅದರಲ್ಲಿ ಬಂದಂತಹ ಆದಾಯವನ್ನು ಪ್ರತಿಬಾನ್ವಿತ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ, ವಿದ್ಯಾರ್ಥಿ ವೇತನವನ್ನು ನೀಡಿ, ಅನಾರೋಗ್ಯ ಪೀಡಿತರಿಗೆ “ಸಾಂತ್ವನ ನಿಧಿ” ವಿಶೇಷ ಚೇತನರಿಗೆ ವ್ಹೀಲ್ ಚಯರ್,ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ ಪರಿಹಾರ,ರಕ್ತ ದಾನ ಶಿಬಿರ,ಮೆಡಿಕಲ್ ಕ್ಯಾಂಪ್ ಗಳನ್ನು ನಡೆಸಿ, ಗುರು ಜಯಂತಿ ಹಾಗೂ ಮಹಿಳಾ ದಿನಾಚರಣೆ ಮತ್ತು ಆಟಿದ ಕೂಟ ವನ್ನು ಆಯೋಜಿಸಿ, ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಮಾರ್ಗದರ್ಶನ ಹಾಗೂ ಸಮಾಜ ಭಾಂಧವರಿಗೆ ಕ್ರೀಡಾ ಕೂಟ ಮತ್ತು ಯುವಕ ಯುವತಿಯರ ವಧು -ವರ ಅನ್ವೇಷಣಾ ಕಾರ್ಯಕ್ರಮ ,ನಾಟಿ ವೈದ್ಯರಿಗೆ ಸನ್ಮಾನ,ವೈದಿಕರ(ಶಾಂತಿ)ಸಮ್ಮೇಳನ, ದೈವಗಳ ಪಾತ್ರಿಗಳಿಗೆ ಅಭಿನಂದನಾ ಸಮಾರಂಭ ,ಮೂರ್ತೆದಾರರ ಗುರುತಿಸುವಿಕೆ ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಗುರುತಿಸಿಕೊಂಡಿದೆ.


ಮಿತ್ತಮಾರು ದಿ. ಬಿರ್ಮಣ ಪೂಜಾರಿಯವರ ಅಧ್ಯಕ್ಷರಾಗಿದ್ದ 1979ರಲ್ಲಿ ಬಿಲ್ಲವ ಸಮುದಾಯದ ಪ್ರಥಮ ತಾಲೂಕು ಸಮ್ಮೇಳನ ನಡೆದಿದ್ದು ಅಂದಿನ ಲೋಕೋಪಯೋಗಿ ಸಚಿವ ಮಾಜಿ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ ನವರು ಆಗಮಿಸಿ ಅಭೂತಪೂರ್ವ ಮೆರವಣಿಗೆಗೆ ಚಾಲನೆ ನೀಡಿದ್ದರು. ಈ ಸಮ್ಮೇಳನದ ನೆನಪಿಗೆ ಕೋಟಿ ಚೆನ್ನಯ ಎಂಬ ಸ್ಮರಣ ಸಂಚಿಕೆ ಹೊರ ತರಾಲಾಗಿತ್ತು.1998ರಲ್ಲಿ ಗಂಗಾಧರ ಮಿತ್ತಮಾರುರವರ ಅಧ್ಯಕ್ಷ ಅವಧಿಯಲ್ಲಿ ಯುವ ಬಿಲ್ಲವ ವೇದಿಕೆಯ ಸ್ಥಾಪಕ ಅಧ್ಯಕ್ಷ ಕೆ. ಹರೀಶ್ ಕುಮಾರ್ ರವರ ಅವಧಿಯಲ್ಲಿ ಬೃಹತ್ ಬಿಲ್ಲವರ ಸಮಾವೇಶ ನಡೆಯಿತು.ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿ ಸುಜಿತಾ ವಿ. ಬಂಗೇರ ಬಿಲ್ಲವ ಮಹಿಳೆಯರು ಸಂಘಟಿತರಾಗಿ ಅನೇಕ ಅರ್ಥಪೂರ್ಣ ಕಾರ್ಯಕ್ರಮ ಮಾಡುತಿದ್ದಾರೆ.2011ರಲ್ಲಿ ಅಧ್ಯಕ್ಷರಾಗಿದ್ದ ಪೀತಾಂಬರ ಹೇರಾಜೆ ಯವರ ಅವಧಿಯಲ್ಲಿ ಸುವರ್ಣ ಮಹೋತ್ಸವ ಆಚರಿಸಲಾಗಿದೆ. ಸುವರ್ಣ ರಥ ಸ್ಮರಣ ಸಂಚಿಕೆ ಹೊರತರಲಾಗಿತ್ತು.ಸಂಘದ ಮಾಜಿ ಅದ್ಯಕ್ಷರು ಸಂಘದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ.
ಹಾಗೂ ಮಾಜಿ ನಿರ್ದೇಶಕರು,ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ವೇದಿಕೆ ಅದ್ಯಕ್ಷರು ಹಾಗೂ ಸದಸ್ಯರ ಸಹಕಾರದಿಂದ ಪ್ರಸ್ತುತ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಮತ್ತು ಎಲ್ಲಾ ನಿರ್ದೇಶಕರ ಮತ್ತು ಸದಸ್ಯರ ಸಹಕಾರದಿಂದ ಮುನ್ನಡೆಯುತ್ತಿರುವ ಸಂಸ್ಥೆಗೆ ಯುವ ನಾಯಕ ರಕ್ಷಿತ್ ಶಿವರಾಮ್ ರ ಮತ್ತು ಜಿಲ್ಲಾ ನಾಯಕರ ಪ್ರಯತ್ನದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿರುತ್ತದೆ.
ನ. 1ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಇತರ ಗಣ್ಯರು ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಸಂಘದ ನಿಕಟ ಪೂರ್ವ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ಡಕ್ಕ, ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್., ಕೋಶಾಧಿಕಾರಿ ಪ್ರಶಾಂತ್ ಕುಮಾರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ. ಕೆ. ಪ್ರಸಾದ್, ಸಂಘದ ಜತೆ ಕಾರ್ಯದರ್ಶಿ ಸಂತೋಷ್ ಉಪ್ಪಾರು, ನಿರ್ದೇಶಕರಾದ ರವೀಂದ್ರ ಬಿ. ಆಮೀನ್ ಬಳಂಜ, ರೂಪೇಶ್ ಧರ್ಮಸ್ಥಳ, ಕಮಲಾಕ್ಷ ಬೆಳ್ತಂಗಡಿ, ಗುರುರಾಜ್ ಗುರಿಪಳ್ಳ, ಸುನಿಲ್ ಕನ್ಯಾಡಿ ಉಪಸ್ಥಿತರಿದ್ದರು.









