
ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಹಾಗೂ ಇಂಟ್ರಾಕ್ಟರ್ ಕ್ಲಬ್ ಇದರ ಜಂಟಿ ಆಶಯದೊಂದಿಗೆ ವಿದ್ಯಾರ್ಥಿಗಳ ಪೋಷಕರ ಬಿಪಿ ಹಾಗೂ ಶುಗರ್ ತಪಾಸಣೆಯನ್ನು ಮಾಡಲಾಯಿತು.

ಶಾಲಾ ಮುಖ್ಯ ಉಪಾಧ್ಯಾಯಿನಿ ಪರಿಮಳ ಎಂ.ವಿ. ಇವರ ಮಾರ್ಗದರ್ಶನದಲ್ಲಿ, ಜೂನಿಯರ್ ರೆಡ್ ಕ್ರಾಸ್ ಹಾಗೂ ಇಂಟರ್ನೆಟ್ ಕ್ಲಬ್ ಇದರ ಜವಾಬ್ದಾರಿಯನ್ನು ವಹಿಸಿಕೊಂಡ ಶಿಕ್ಷಕರ ಸಹಕಾರದೊಂದಿಗೆ ನುರಿತ ವಿದ್ಯಾರ್ಥಿಗಳ ಒಂದು ತಂಡ ಈ ತಪಾಸಣೆಯನ್ನು ನಿರ್ವಹಿಸಿತು.