“ISO ಪ್ರಮಾಣೀಕರಣ” ಕುರಿತು ತರಬೇತಿ ಕಾರ್ಯಾಗಾರ

0

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮ ಪಂಚಾಯತ್ ಮತ್ತು ಸುಲ್ಕೆರಿ ಗ್ರಾಮ ಪಂಚಾಯತ್ ISO 9001-2015 (International Organization for Standardization )ಅಂತಾರಾಷ್ಟ್ರೀಯ ಗುಣಮಟ್ಟ ನಿರ್ವಹಣಾ ಮಾನದಂಡ 9001-2015 ಇದರ ಪ್ರಮಾಣಪತ್ರ ಪಡೆಯಲು ಎರಡು ಪಂಚಾಯತ್ ಗಳು ಆಯ್ಕೆಯಾಗಿದ್ದು, ಇದರ ಅಂಗವಾಗಿ ಮೈಸೂರು ಅಬ್ದುಲ್ ನಜಿರ್ ಸಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯಲ್ಲಿ ತರಬೇತಿ ಕಾರ್ಯಾಗಾರ ಜು.21ರಂದು ನಡೆಯಿತು.

ನಾವೂರು ಗ್ರಾಮ ಪಂಚಾಯತ್ ನಿಂದ ನಿಕಟ ಪೂರ್ವ ಅಧ್ಯಕ್ಷರು, ಹಾಲಿ ಸದಸ್ಯ ಗಣೇಶ್ ಗೌಡ ನಾವೂರು, ಪಂಚಾಯತ್ ಪಿ.ಡಿ.ಓ. ಪೂರ್ಣಿಮಾ ಜೆ., ಗಿರಿಜಾ ಸುಲ್ಕೇರಿ ಪಂಚಾಯತ್ ಅಧ್ಯಕ್ಷರು, ಪಿ.ಡಿ.ಒ. ಗಾಯತ್ರಿ ಪಿ. ಕಾರ್ಯದರ್ಶಿ ಕೊರಗಪ್ಪ ನಾಯ್ಕ ಅವರು ಭಾಗವಹಿಸಿದರು.

LEAVE A REPLY

Please enter your comment!
Please enter your name here