



ನಾರಾವಿ: ತುಳಸಿ ಕ್ರಿಯೇಷನ್ಸ್ ತಂಡದ “ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ” ಡಿ. 14ರಂದು ಬಲ್ಯೊಟ್ಟು ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಬಿಡುಗಡೆಗೊಂಡಿತು. ತಂಡದ ಹೊಸ ಲೋಗೋ ಹಾಗೂ ಸಮವಸ್ತ್ರ ಬಿಡುಗಡೆಯನ್ನು, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರು ನೆರವೇರಿಸಿದರು. ಅವರೊಂದಿಗೆ ಜೊತೆಗೂಡಿ ಬಲ್ಯೊಟ್ಟು ಶ್ರೀ ಸ್ವಾಮಿ ಕೊರಗಜ್ಜ ದೈವಸ್ಥಾನ ಕ್ಷೇತ್ರದ ದೀಪರಾಧಕರಾದ ಸೂರಜ್ ಪೂಜಾರಿ ಬಲ್ಯೊಟ್ಟು ಹಾಗೂರತೀಶ್ ಬಲ್ಯೊಟ್ಟು, ಸಮಾಜ ಸೇವಕ ಲೋಕೇಶ್ ಕುತ್ಲೂರು, ಯುವ ಗಾಯಕ, ಯುವ ಸಾಹಿತಿ & ತಂಡದ ಸಂಚಾಲಕ ಸುಜಿತ್ ಎಸ್ ನಾರಾವಿ ಅವರು ಭಾಗವಹಿಸಿದರು.


ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬರಲು ಅಸಾಧ್ಯವಾದ ತಂಡದ ಮಹಿಳಾ ಸಂಚಾಲಕಿ ಸನ್ನಿಧಿ ಪೂಜಾರಿ ಕಾರ್ಕಳ ಹಾಗೂ ತಂಡದ ಬಾಲ ಸಮಿತಿಯ ಅಧ್ಯಕ್ಷ ವಂದನ ವಿ.ಎಸ್ ಕಾಡುಮನೆ-ಕಲ್ಲುಗುಡ್ಡೆ ಅವರು ಶುಭ ಹಾರೈಸಿದರು.









