
ಬೆಳ್ತಂಗಡಿ: 2025- 26ನೇ ಸಾಲಿನ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಗತಿ ಪಥ ಯೋಜನೆಯಡಿಯಲ್ಲಿ ಹಂಚಿಕೆಯಗಿರುವ ಅನುದಾನವನ್ನು ಮುಂಡಾಜೆ ಕಾಯರ್ತೋಡಿ ರಸ್ತೆ, ಬಂದಾರು ಪೆರ್ಲ ಕುರುಡಂಗೆ ರಸ್ತೆ, ಪುತ್ತಿಲ, ಬಜಕಲ ರಸ್ತೆ, ಬಂಗೇರಕಟ್ಟೆ, ನೆತ್ತರ, ನಿರ್ವಾಜೆ ರಸ್ತೆ, ನಾರ್ಯ, ದೊಂಡಲೆ ರಸ್ತೆ,
ನಾರಾವಿ ಪಾಣಾಲು ರಸ್ತೆಗಳಿಗೆ ನೀಡಬೇಕೆಂದು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಶಾಸಕ ಹರೀಶ್ ಪೂಂಜಾ ಮನವಿ ಮಾಡಿದರು.