ಉಜಿರೆ: ಚಾರ್ಮಾಡಿ ರಸ್ತೆಯ ಮಾರಿಗುಡಿ ದೇವಸ್ಥಾನದ ಸಮೀಪ ಅಂಗಡಿ ಮತ್ತು ಹೋಟೆಲ್ ಗೆ ಕಳ್ಳರು ನುಗ್ಗಿದ ಘಟನೆ ಸೆ.6ರಂದು ನಡೆದಿದೆ.


ಬೀಗ ಮುರಿದು ಅಂಗಡಿಯಿಂದ 3ಸಾವಿರ ಬೆಳೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ. ಹೋಟೆಲಿನಿಂದ ಸಣ್ಣ ಪುಟ್ಟ ವಸ್ತುಗಳನ್ನು ತೆಗೆದುಕೊಂಡಿದ್ದಾರೆ ಎನ್ನುತ್ತಾರೆ ಮಾಲೀಕರು.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.