ಬೆಳ್ತಂಗಡಿ: ಶೊರಿನ್ ರಿಯೋ ಕರಾಟೆ ಅಸೋಸಿಯೇಷನ್ ಹಾಗೂ ಸ್ವಾಮೀಸ್ ಸ್ಟ್ರೆಂತ್ ಟ್ರೈನಿಂಗ್ ಮತ್ತು ಎಂ.ಕೆ. ಅನಂತರಾಜು ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಮೂಡಬಿದ್ರೆಯ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ಸೆ. 1ರಂದು ನಡೆದ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಕೂಟದಲ್ಲಿ ಉಸ್ಮಾನ್ ಆದಿಲ್ ಅವರು ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇವರು ಕಕ್ಕಿಂಜೆಯ ಸೇಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುತ್ತಾರೆ. ಕಕ್ಕಿಂಜೆಯ ಅಬ್ದುಲ್ ಜಲೀಲ್ ಹಾಗೂ ಸಮೀಮ ಬಾನು ದಂಪತಿಯ ಪುತ್ರರಾಗಿರುತ್ತಾರೆ. ಇವರಿಗೆ ಶಿಹಾನ್ ಅಬ್ದುಲ್ ರಹಮಾನ್ ರವರು ಕರಾಟೆ ತರಬೇತಿಯನ್ನು ನೀಡಿರುತ್ತಾರೆ.