ಉಜಿರೆ: ವರ್ತಕರ ಸಂಘದ ಕ್ರಿಯಾಶೀಲ ಸದಸ್ಯೆ ಲೀಲಾವತಿ ಅವರು ಬಹಳ ಕಷ್ಟಪಟ್ಟು ಸೆ.7ರಂದು ಒಂದು ಅಂಗಡಿಯನ್ನು ಪ್ರಾರಂಭಿಸಿದರು. ಆದರೆ ನಿನ್ನೆಯೇ ಅಂಗಡಿಗೆ ಕಳ್ಳರು ನುಗ್ಗಿ ಸುಮಾರು 3000 ರೂ. ಬೆಲೆಯ ವಸ್ತುಗಳನ್ನು ಕದ್ದಿರುತ್ತಾರೆ. ವಿಷಯ ತಿಳಿದ ಉಜಿರೆ ವರ್ತಕರ ಸಂಘದವರು ಅವರ ಅಂಗಡಿಗೆ ಹೋಗಿ ಅವರಿಗೆ 3000 ರೂ. ಧನ ಸಹಾಯವನ್ನು ಮಾಡಿ ಜೊತೆಗೆ ನಾವಿದ್ದೇವೆ ಎಂಬ ದೈರ್ಯವನ್ನು ತುಂಬಿದ್ದೇವೆ.
ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ರಮ್ಯ, ಕಾರ್ಯದರ್ಶಿ ಅಬೂಬಕ್ಕರ್, ನಿಕಟಪೂರ್ವ ಅಧ್ಯಕ್ಷ ಅರವಿಂದ್ ಕಾರಂತ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು ವರ್ತಕ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಹಳ್ಳಿಮನೆ, ಜಯಂತ್ ನಮನ್ ಬೇಕರಿ, ಪ್ರಶಾಂತ್ ಅಮೃತ್ ಟೆಕ್ಸ್ ಟೈಲ್ಸ್ ಸದಸ್ಯ ವಿಜಯ್ ಶ್ರೀ ರಾಂ ತರಕಾರಿ ಅವರು ಉಪಸ್ಥಿತರಿದ್ದರು.