



ಕುಕ್ಕೇಡಿ: ನಿಟ್ಟಡೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ, ಬಿಲ್ಲವ ಮಹಿಳಾ ವೇದಿಕೆ, ಯುವವಾಹಿನಿ ಸಂಚಾಲನ ಸಮಿತಿ ಕುಕ್ಕೇಡಿ ನಿಟ್ಟಡೆಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಗುರುಜಯಂತಿ ಕಾರ್ಯಕ್ರಮ ಡಿ. 14ರಂದು ಕುಕ್ಕೇಡಿ ಸಂಘದ ನಿವೇಶನದಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ತಾಲೂಕು ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಯುವಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ ಭಾಗವಹಿಸಿದರು.


ಶೇ. 90%ಗಿಂತ ಅಧಿಕ ಅಂಕ ಗಳಿಸಿದ ಎಸ್. ಎಸ್. ಎಲ್. ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ನಿವೃತ್ತ ಅಂಚೆ ಪಾಲಕ ಎಂ. ವಿಶ್ವನಾಥ ಪೂಜಾರಿ ಮುಂಡೇವು, ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ ಭವಿಷ್ಯ ಅವರನ್ನು ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಮಂಗಳತೇರು ವಹಿಸಿದರು. ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷರಾಗಿ ಕೇಶವ ಬೊರ್ಡಲು ಕಾರ್ಯದರ್ಶಿಯಾಗಿ ಪದ್ಮನಾಭ ಅಂಬಗುಡ್ಡೆ, ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ಗುಣವತಿ ಡಿ., ಯುವಬಿಲ್ಲವ ವೇದಿಕೆ ಅಧ್ಯಕ್ಷರಾಗಿ ರಾಜೇಂದ್ರ ಕೂಟೇಲು, ಯುವವಾಹಿನಿ ಸಂಚಾಲನ ಸಮಿತಿ ಅಧ್ಯಕ್ಷರಾಗಿ ಸಂಪತ್ ಅಂಚನ್ ಅಧಿಕಾರ ವಹಿಸಿಕೊಂಡರು.
ವೇದಿಕೆಯಲ್ಲಿ ಪ್ರಧಾನ ಅರ್ಚಕ ಯೋಗೀಶ್ ಶಾಂತಿ ಸೊರೆಗೆದಡಿ, ಜಯರಾಜ್ ಶಾಂತಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಹರಿಣಾಕ್ಷಿ, ಯುವಬಿಲ್ಲವ ವೇದಿಕೆಯ ಅಧ್ಯಕ್ಷ ನವೀನ್ ಅಮೈ, ಯುವವಾಹಿನಿ ಅಧ್ಯಕ್ಷ ಸಂತೋಷ್ ಹಚ್ಚೇವು ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಮಂಜಲೊಕ್ಕು, ಯುವವಾಹಿನಿ ವೇಣೂರು ಘಟಕದ ಕಾರ್ಯದರ್ಶಿ ದಕ್ಷ ಅಂಡಿಂಜೆ ಉಪಸ್ಥಿತರಿದ್ದರು. ತೇಜಸ್ವಿನಿ ಮತ್ತು ಪ್ರಾಪ್ತಿ ಅವರ ಪ್ರಾರ್ಥನೆಯೊಂದಿಗೆ ಪ್ರಶಾಂತ್ ಸ್ವಾಗತಿಸಿದರು. ರಾಜೇಂದ್ರ ಕೆ. ವರದಿ ವಾಚಿಸಿದರು. ಸನ್ಮಾನಿತರ ಪರಿಚಯವನ್ನು ಜಯಂತಿ ಅಮೈ ಮತ್ತು ಅಜಂತ್ ಕೋಟ್ಯಾನ್ ವಾಚಿಸಿದರು. ಕಾರ್ಯಕ್ರಮವನ್ನು ಬೆಳ್ತಂಗಡಿ ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್. ನಿರೂಪಿಸಿದರು. ಕೊನೆಯಲ್ಲಿ ಸಂಧ್ಯಾ ಬೊರ್ಡೇಲು ಧನ್ಯವಾದವಿತ್ತರು.









