ಗೇರುಕಟ್ಟೆ : ಕಳಿಯ ಗ್ರಾಮದ ಬೆರ್ಕೆತೋಡಿ ನಿವಾಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ. ಸಂಜೀವ ಬಂಗೇರ (70 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಸೆ. 7ರಂದು ನಿಧನರಾದರು.
ಮೃತರು ಗೇರುಕಟ್ಟೆಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಪ್ರಗತಿ ಕೃಷಿಕರಾಗಿದ್ದರು.
ಇವರು ಪತ್ನಿ ಬಿ.ಸೀತಾ, ಪುತ್ರ ಕಳಿಯ ಗ್ರಾಮ ಪಂಚಾಯತ್ ಸದಸ್ಯ, ನಾಳ ದೇವಸ್ಥಾನದ ವ್ಯವಸ್ಥಾನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ., ವಸಂತ ಬಿ., ಪುತ್ರಿ ಜ್ಯೋತಿ ದಿನೇಶ್ ಪೂಜಾರಿ, ಇಬ್ಬರು ಸಹೋದರರನ್ನು ಆಗಲಿದ್ದಾರೆ.