ಬೆಳ್ತಂಗಡಿ: ಚಿನ್ನಯ್ಯನ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ಯೂಟ್ಯೂಬ್ ನಲ್ಲಿ ಹಲವಾರು ಸಂದರ್ಶನಗಳನ್ನ ಪ್ರಸಾರ ಮಾಡಿದ್ದ ಮತ್ತು ಚಿನ್ನಯ್ಯನ ಜೊತೆ ಒಡನಾಟ ಹೊಂದಿದ್ದ ಕಾರಣಕ್ಕೆ ಎಸ್.ಐ.ಟಿ ಯುನೈಟೆಡ್ ಮೀಡಿಯಾ ಎಂಬ ಯೂಟ್ಯೂಬ್ ಚಾನೆಲ್ ನ ಅಭಿಷೇಕ್ ನನ್ನು ಸೆ.3ರಂದು ವಿಚಾರಣೆ ನಡೆಸಿದೆ. ಸೆ.3ರ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದು, ಸೆ.4ರಂದು ಕೂಡ ವಿಚಾರಣೆ ಮುಂದುವರೆಯಲಿದೆ.