ಬೆಳಾಲು: ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಆಮಂತ್ರಣ ಪತ್ರಿಕೆ ಬಿಡುಗಡೆ ಜು. 13ರಂದು ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೆಚ್. ಪದ್ಮಗೌಡ, ದೇವಸ್ಥಾನದ ಅರ್ಚಕ ಕೇಶವ ರಾಮಾಯಾಜಿ, ಮಾಯಾಗುತ್ತು ಅನುವಂಶಿಕ ಮೊಕ್ತೇಸರ ಪುಷ್ಪದಂತ ಜೈನ್, ವ್ಯವಸ್ಥಾಪನ ಸಮಿತಿ ಸದಸ್ಯ ದಿನೇಶ್ ಎಂ. ಕೆ. ಮಾಯ ಫ್ರೆಂಡ್ಸ್ ಕಾರ್ಯದರ್ಶಿ ಗಣೇಶ್ ಕನಿಕ್ಕಿಲ,ಮತ್ತು ಸದಸ್ಯರು, ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗೌಡ, ಸದಸ್ಯರು, ಪೂಜಾ ಸಮಿತಿಯ ಸ್ಥಾಪಕಾಧ್ಯಕ್ಷೆ ಸುಕನ್ಯಾ ನಾರಾಯಣ, ನಿಕಟಪೂರ್ವ ಅಧ್ಯಕ್ಷೆ ಡಾ. ಶೀಲಾವತಿ, ಅಧ್ಯಕ್ಷೆ ಲಲಿತಾ ಮೋನಪ್ಪ ಗೌಡ, ಕಾರ್ಯದರ್ಶಿ ಮಮತಾ ಎಂಜಿರಿಗೆ, ಕೋಶಾಧಿಕಾರಿ ಕನ್ನಿಕಾ ಪದ್ಮ ಗೌಡ, ಮಾರ್ಗದರ್ಶಕ ಧರ್ಮೇ0ದ್ರ ಕುಮಾರ್, ಮಹಿಳಾ ಭಕ್ತವೃಂದದ ಕಾರ್ಯಕಾರಿ ಸಮಿತಿಯ ಸದಸ್ಯರು ಊರ ಭಕ್ತರು ಹಾಜರಿದ್ದರು.
,