ಕಳೆಂಜ: ಪರಪ್ಪು ನಿಂದ ಕುಕ್ಕಾಜೆ ಮೂಲಕ ಅಮ್ಮಿನಡ್ಕವಾಗಿ ಕಳೆಂಜ ಸಂಪರ್ಕಿಸುವ ರಸ್ತೆ ಮಳೆಯಿಂದಾಗಿ ಪೂರ್ತಿ ಹದಗೆಟ್ಟು ಹೋಗಿತ್ತು. ಈ ರಸ್ತೆಯನ್ನು ಶ್ರಮದಾನದ ಮೂಲಕ ಸ್ಥಳೀಯ ನಿವಾಸಿಗಳಾದ ಗಂಗಾಧರ ಗೌಡ, ಮಹೇಶ್ ಪಲ್ಲದಮೂಲೆ, ಮಾಧವ ಗೌಡ ಗೇಣಿಗದ್ದೆ, ಜನಾರ್ಧನ ಗೌಡ ಕುಂಡಕ್ಕ, ನಿಶಾಂತ್ ಬಟ್ಯಾಲು, ಹರೀಶ್ ಕುಕ್ಕಾಜೆ, ಹರೀಶ್ ನೆಕ್ಕರಾಜೆ, ಸುರೇಶ್ ಶೆಟ್ಟಿ, ರಾಜೇಶ ಶೆಟ್ಟಿ ಕುಟ್ರುಗ ಸೇರಿ ಚರಂಡಿ ಸ್ವಚ್ಛಗೊಳಿಸಿ, ಕೆಸರು ಇರುವ ಕಡೆ ಸಣ್ಣ ಸಣ್ಣ ಕಲ್ಲುಗಳನ್ನು ಜೋಡಿಸಿ ತಕ್ಕ ಮಟ್ಟಿಗೆ ಸಂಚಾರಕ್ಕೆ ಯೋಗ್ಯವಾಗುವಂತೆ ಸಿದ್ದಪಡಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಕಳೆಂಜ: ಗ್ರಾಮದ ಕುಕ್ಕಾಜೆ, ಅಮ್ಮಿನಡ್ಕ ರಸ್ತೆ ದುರಸ್ತಿ- ಶ್ರಮದಾನದ ಮೂಲಕ ಸರಿಪಡಿಸಿದ ಗ್ರಾಮಸ್ಥರು