ಲಾಯಿಲ: ಗ್ರಾಮ ಪಂಚಾಯತ್ ವ್ಯಾಪ್ತಿಯ 68ನೇ ಬೂತಿನ ಗಾಂಧಿನಗರ 2ನೇ ಅಡ್ಡರಸ್ತೆಯ ಬಹು ದಿನಗಳ ಬೇಡಿಕೆಯಾದ ಪರಿಶಿಷ್ಠ ಕಾಲೋನಿ ರಸ್ತೆಕಾಮಗಾರಿಯ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿಯವರ ಅನುಪಸ್ಥಿತಿಯಲ್ಲಿ ನ್ಯಾಯಾವಾದಿ ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹಾಗೂ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಗ್ಯಾರಂಟಿ ಯೋಜನೆಯ ಸದಸ್ಯೆ ಸೌಮ್ಯ ಲಾಯಿಲಾ, ಖಾಲೀದ್ ಕಕ್ಯಾನ, ಮೊಹಮ್ಮದ್ ಅಲಿ ಕಕ್ಯಾನ, ಜಗನ್ನಾಥ ಬೈರ ಗಾಂಧಿನಗರ ಜಿಲ್ಲಾ ಮಾಧ್ಯಮ ವಕ್ತಾರರು S.C ಘಟಕ, ಶರೀಫ್ ಕುಂಟಿನಿ, ಉಬೈದ್ ಕುಂಟಿನಿ, ಸಾವಿತ್ರಿ ಪುತ್ರಬೈಲು, ಸುರೇಶ್ ಬೈರಾ, ಗ್ರೇಸಿ ಲೋಬೋ, ವಿವೇಕ್ ಎಸ್. ಡಿ. ನಮನ ಹಾಗೂ ಊರವರು ಉಪಸ್ಥಿತರಿದ್ದರು.