ಕೊಕ್ಕಡ :ದೀಪಾವಳಿ ಹಬ್ಬದ ಪ್ರಯುಕ್ತ ಕೊಕ್ಕಡದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಭಿನ್ನ ರುಚಿಗಳ ಸಂಭ್ರಮವಾಗಿ ದೋಸೆ ಪರ್ಬ ಅ.20ರಂದು ಕೊಕ್ಕಡ ವೈದ್ಯನಾಥೇಶ್ವರ ರೆಸಿಡೆನ್ಸಿ ವಠಾರದಲ್ಲಿ ಅದ್ದೂರಿಯಾಗಿ ಜರುಗಿತು.
ಪೌರಾಣಿಕ ಹಬ್ಬದಂತೆಯೇ ವಿಶಿಷ್ಟ ಆಹಾರ ಮೇಳವನ್ನು ಸ್ವಾಮಿ ಪ್ರಸಾದ್ ಅಸೋಸಿಯೇಟ್ಸ್ ಸಂಸ್ಥೆ ಆಯೋಜಿಸಿತ್ತು. ಕಾರ್ಯಕ್ರಮವನ್ನು ಸಂಸ್ಥೆಯ ಮಾಲಕ ಮಾಯಿಲಪ್ಪ ಗೌಡ ದಂಪತಿಗಳು ದೀಪ ಪ್ರಜ್ವಲಿಸುವ ಮೂಲಕ ಭಾವಪೂರ್ಣವಾಗಿ ಉದ್ಘಾಟಿಸಿದರು.
ದೀಪಾರಾಧನೆಯ ನಂತರ ವಠಾರವು ಹಬ್ಬದ ವಾತಾವರಣವನ್ನು ಪಡೆದುಕೊಂಡಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಕೆ.ಎಂ.ನಾಗೇಶ್ ಕುಮಾರ್ ಗೌಡ, ಅವರ ಸಹೋದರರಾದ ಗಿರೀಶ್ ಕುಮಾರ್ ಗೌಡ ಹಾಗೂ ಸುಧಾ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.ಕೊಕ್ಕಡದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಈ ವಿಶಿಷ್ಟ ದೋಸೆ ಪರ್ಬದಲ್ಲಿ ನೂರಾರು ಜನರು ಭಾಗವಹಿಸಿ ದೋಸೆಗಳ ಸವಿಯನ್ನು ಸವಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಮತ್ತು ಗಣ್ಯರು ದೋಸೆ ಪರ್ಬದ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿ ಆಯೋಜಕರಿಗೆ ಶುಭಕೋರಿದರು. ಈ ಹಬ್ಬವು ಊರಿನ ಸೌಹಾರ್ದ, ಸ್ನೇಹ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ ಎಂದು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಗೇಶ್ ಕುಮಾರ್ ಗೌಡ ಅವರು ಮಾತನಾಡಿ ಈ ದೋಸೆ ಪರ್ಬವು ಕೇವಲ ಆಹಾರ ಸವಿ ಅಲ್ಲ, ಇದು ನಮ್ಮ ಸಂಸ್ಕೃತಿಯ ಸಂಭ್ರಮ ಊರಿನ ಜನರು ಒಂದೇ ವೇದಿಕೆಯಲ್ಲಿ ಸೇರುವಂತಾಗಿದ್ದು, ಇದು ನಮ್ಮ ಕೊಕ್ಕಡದ ಹೆಮ್ಮೆ ಎಂದರು.