ಮಡಂತ್ಯಾರು: ರೋಟರಿ ಕ್ಲಬ್ ನ ಸಾಮಾನ್ಯ ಸಭೆಯು ಕ್ಲಬ್ ನ ಅಧ್ಯಕ್ಷ ರೋ. ಪಿ.ಹೆಚ್.ಎಫ್ ಮ್ಯಾಕ್ಷಿಂ ಅಲ್ಬುಕರ್ಕ್ ಅವರ ನೇತೃತ್ವದಲ್ಲಿ ಅ. 12ರಂದು ಎಸ್.ಡಿ.ಎಸ್. ಮಿನಿ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ವಲಯ 4, ಡಿಸ್ಟ್ರಿಕ್ಟ್ 3181 ನ ಅಸಿಸ್ಟಂಟ್ ಗವರ್ನರ್ ರೋ. ಪಿ.ಹೆಚ್.ಎಫ್ ಡಾ. ಎ. ಜಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಅಲ್ಲದೆ ಪೂರ್ವ ಅಧ್ಯಕ್ಷ ರೋ. ಪಿ.ಹೆಚ್.ಎಫ್. ನಿತ್ಯಾನಂದ ಬಿ., ಕ್ಲಬ್ ನ ಸ್ಥಾಪಕ ಅಧ್ಯಕ್ಷ ರೋ. ಪಿ.ಹೆಚ್.ಎಫ್. ಮೊನಪ್ಪ ಪೂಜಾರಿ ಮತ್ತು ಕಾರ್ಯದರ್ಶಿ ರೋ. ಪಿ.ಹೆಚ್.ಎಫ್. ಜಿ ವಾಸುದೇವ ಗೌಡ ಅವರು ವೇದಿಕೆಯಲ್ಲಿದ್ದರು. ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಅಡಿಕೆ ಮಾರಾಟಗಾರರ ಸಂಘದ ಅಧ್ಯಕ್ಷ ಆಯ್ಕೆಯಾದ ಮಡಂತ್ಯಾರು ಶ್ರೀ ದೇವಿ ಟ್ರೇಡರ್ಸ್ ಮಾಲಕ ರೋ. ಪ್ರಶಾಂತ್ ಎಂ. ಶೆಟ್ಟಿ ಅವರ ಕಾರ್ಯ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಪ್ರಯೋಜಕ ರೋ. ಪಿ.ಹೆಚ್.ಎಫ್. ಜಯಂತ್ ಬಿ ಶೆಟ್ಟಿ, ರೋ. ಪಿ.ಹೆಚ್.ಎಫ್. ರಾಮ ಭಟ್, ರೋ. ಉದಯ ಕುಮಾರ್ ಜೈನ್, ರೋ. ಸಿಲೆಸ್ಟಿನ್ ಡಿಸೋಜ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳು ರೋಟರಿ ಕ್ಲಬ್ ಮತ್ತು ಕ್ಲಬ್ ಜನರು ಸೇರುವ ಮಹತ್ವದ ಕುರಿತು ಉತ್ತಮವಾದ ಮಾಹಿತಿಯನ್ನು ನೀಡಿದರು. ಅಲ್ಲದೆ ಕ್ಲಬ್ ಮಾಡಲಾದ ಸೇವೆಗಳಿಗಾಗಿ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ನ ಎಲ್ಲಾ ಸದಸ್ಯರು, ಆನ್ಸ್, ಆನ್ನೆಟ್ಸ್ ಮತ್ತು ರೋಟರಿ ಮಿತ್ರರು ಭಾಗವಹಿಸಿದರು. ಹಾಗೂ ರೋಟರಿ ಕಾರ್ಯಕ್ರಮದ ರೋಟರಿ ರಿಪ್ಲೆಕ್ಟ್ ನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಕೊನೆಗೆ ಕ್ಲಬ್ ನ ಕಾರ್ಯದರ್ಶಿ ವಂದನಾರ್ಪಣೆಗೈದರು.