ಅಳದಂಗಡಿ: ಆಮಂತ್ರಣ ಸೇವಾ ಪ್ರತಿಷ್ಠಾನದ ಉದ್ಘಾಟನೆ, ಪತ್ರಕರ್ತರು ಮತ್ತು ಸಾಧಕರಿಗೆ ಸನ್ಮಾನ, ಕವಿಗೋಷ್ಠಿ, ಹಾಡು, ಯಕ್ಷಗಾನ ತರಬೇತಿಯ ಉದ್ಘಾಟನೆ ಜು.13ರಂದು ಅಳದಂಗಡಿ ಮೌಂಟ್ ಕಾರ್ಮೆಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಶಾಸಕ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಆಮಂತ್ರಣ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಶಿವಪ್ರಸಾದ್ ಅಜಿಲ ಮಾತನಾಡಿ ಅರ್ಥಪೂರ್ಣ ಕಾರ್ಯಕ್ರಮ. ಸಮಾಜದಲ್ಲಿ ಸಹಾಯಹಸ್ತ ಕಲ್ಪಿಸುವಲ್ಲಿ ಸೇವಾ ಪ್ರತಿಷ್ಠಾನಗಳು ಹುಟ್ಟಿಕೊಳ್ಳುವ ಮೂಲಕ ಸ್ವಸ್ಥ ಸಮಾಜಕ್ಕೆ ಸಹಕಾರಿಯಾಗಲಿದೆ. ಇದು ಎಲ್ಲರಿಗೂ ಸದುಪಯೋಗವಾಗಲಿ ಎಂದು ಹೇಳಿದರು.
ಗುರುವಾಯನಕೆರೆ ಎಕ್ಷೆಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ ನಾವು ಉತ್ತಮ ಕೆಲಸವನ್ನು ಮಾಡಿದಲ್ಲಿ ಸಮಾಜ ಎಂದಿಗೂ ಗುರುತಿಸುತ್ತದೆ ಎಂಬುದಕ್ಕೆ ಆಮಂತ್ರಣ ಪ್ರತಿಷ್ಠಾನ ಮಾದರಿ. ಆಮಂತ್ರಣ ಪ್ರತಿಷ್ಠಾನ ಸೇವಾ ಚಟುವಟಿಕೆ ಮಾಡುವವರನ್ನು ಗುರುತಿಸುವ ಕಾರ್ಯವಾಗಿದೆ. ಈ ಮೂಲಕ ಎಕ್ಸೆಲ್ ಸಂಸ್ಥೆ ಸಂಪೂರ್ಣ ಜತೆಗಿದೆ. ಶೀಘ್ರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಿ ಈ ಕಾರ್ಯಕ್ರಮಕ್ಕೆ ಎಕ್ಷೆಲ್ ವಿದ್ಯಾ ಸಂಸ್ಥೆಯಿಂದ ಸಂಪೂರ್ಣ ಸಹಕಾರ ನೀಡುತ್ತೇನೆ. ಉತ್ತಮ ವ್ಯಕ್ತಿತ್ವವುಳ್ಳ ಮಕ್ಕಳನ್ನು ಸೃಷ್ಟಿಸುವುದೇ ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವದಾಸ್ ಎಸ್.ಶೆಟ್ಟಿ ಹಿಬರೋಡಿ ಶುಭ ಹಾರೈಸಿದರು. ಧರ್ಮಸ್ಥಳದ ಬಿ. ಭುಜಬಲಿ
ಮಾತನಾಡಿ ಆಮಂತ್ರಣ ತಂಡ ಎಲ್ಲ ಕ್ಷೇತ್ರದವರನ್ನು ಆಯ್ಕೆ ಮಾಡಿ ಗೌರವಿಸಿರುವುದು ಅಭಿನಂದನಾರ್ಹ. ಪ್ರತಿಭೆಗೆ ವೇದಿಕೆ ಕಲ್ಪಿಸಿದ ಪ್ರತಿಷ್ಠಾನ ಆಮಂತ್ರಣ. ಎಲ್ಲರ ಸಹಕಾರದಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಹಣ ಇದ್ದರೆ ಸಾಲದು, ಹಣವನ್ನು ಯಾವ ರೂಪದಲ್ಲಿ ವಿನಿಯೋಗಿಸಿಕೊಳ್ಳಬೇಕು ಎಂಬುದು ಮುಖ್ಯವಾಗಿದೆ ಎಂದು ಹೇಳಿದರು.
ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಅವರಿಗೆ ಉತ್ತೇಜನ ನೀಡುತ್ತಿರುವುದು ಅಭಿನಂದನಾರ್ಹ ಎಂದರು. ಧಾರ್ಮಿಕ ಮುಖಂಡ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ ವಿವಿಧ ಆಯಾಮಗಳಲ್ಲಿರುವ ಕ್ಷೇತ್ರದಲ್ಲಿರುವವರನ್ನು ಜತೆ ಸೇರಿಸಿ ಸೇವಾ ಪ್ರತಿಷ್ಠಾನವನ್ನು ವಿಜಯ್ ಕುಮಾರ್ ಸ್ಥಾಪಿಸಿದ್ದಾರೆ. ಆಮಂತ್ರಣ ಪ್ರತಿಷ್ಠಾನ ಸಮಾಜಕ್ಕೆ ಎಲ್ಲ ರೀತಿಯ ಸೇವೆ ದೊರೆಕಲಿ ಎಂದು ಹಾರೈಸಿದರು. ಪತ್ರಕರ್ತರಾದ ನಾಬಿರಾಜ್ ಪೂವಣೆ, ಜಾರಪ್ಪ ಪೂಜಾರಿ ಬೆಳಾಲು, ಬಿ.ಎಸ್.ಕುಲಾಲ್, ಮನೋಹರ್ ಬಳಂಜ, ಚೈತ್ರೇಶ್ ಇಳಂತಿಲ ಇವರನ್ನು
ನಿವೃತ್ತ ಆಶಾ ಕಾರ್ಯಕರ್ತೆಯರಾದ ಪದ್ಮಿನಿ ಜೆ. ಶೆಟ್ಟಿ ಅಳದಂಗಡಿ, ಗುಲಾಬಿ ಶೆಟ್ಟಿ ಕರಂಬಾರು, ಗುಲಾಬಿ ಎಂ.ಎನ್. ತೆಂಕಕಾರಂದೂರು, ಹಾಗೂ ವ್ಯಾಯಾಮ ಶಾಲೆ ನಡೆಸುತ್ತಿದ್ದ ಹಾಗೂ ನೀರಿನ ತಜ್ಞರಾಗಿ 8000 ಕಡೆ ನೀರು ಗುರುತಿಸಿರುವ ಅಳದಂಗಡಿಯ ಸುಲೈಮಾನ್ ಶಾಫಿ, ಚಿತ್ರಕಲಾವಿದೆ ರಾಜೇಶ್ವರಿ ಕೆ.ಆಚಾರ್ಯ ಗುರುವಾಯನಕೆರೆ, ಭಜನಾ ಕಲಾವಿದ ಮಂಜುನಾಥ ಆಚಾರ್ಯ ಅಳದಂಗಡಿ, ಯಕ್ಷಗಾನ ಕಲಾವಿದ, ಶಿಕ್ಷಕ, ಸ್ತ್ರೀವೀಷಧಾರಿ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ಅವರನ್ನು ಸಮ್ಮಾನಿಸಲಾಯಿತು.
ಆಮಂತ್ರಣ ಸೇವಾ ಪ್ರತಿಷ್ಠಾನಾದ ವಿವಿಧ ತಾಲೂಕುಗಳ ಪದಾಧಿಕಾರಿಗಳನ್ನು, ಟ್ರಷ್ಟಿ ಗಳನ್ನು ಸನ್ಮಾನಿಸಲಾಯಿತು.
ಆಮಂತ್ರಣ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟಷ್ಟಿ ವಿಜಯ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಹೆಚ್. ಕೆ. ನೈನಾಡ್ ವಂದಿಸಿದರು. ಬಳಿಕ ಕವಿಗೋಷ್ಠಿ ನಡೆಯಿತು.