

ಉಜಿರೆ: ಸಂತ ಅಂತೋಣಿ ಚರ್ಚ್ ನವೀಕರಣಕ್ಕೆ ಚಾಲನೆ ನೀಡಲಾಗಿದ್ದು ಇದರ ಮುಖ್ಯ ಗೋಪುರದ ಶಿಲಾನ್ಯಾಸ ಕಾರ್ಯಕ್ರಮವು ಮಾ. 23ರಂದು ನೆರವೇರಿಸಲಾಯಿತು. ಚರ್ಚ್ ನಲ್ಲಿ ಸ್ಥಳಾವಕಾಶ ನೀಗಿಸಲು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಚರ್ಚ್ ನಲ್ಲಿ ನಿರ್ಮಾಣಗೊಂಡ ಕಟ್ಟಡದ ಆಶೀರ್ವಚನ ಮತ್ತು ಶಿಲಾನ್ಯಾಸವನ್ನು ಚರ್ಚ್ ಪ್ರಧಾನ ಧರ್ಮ ಗುರು ಫಾ. ಅಬೆಲ್ ಲೋಬೊ ನೆರವೇರಿಸಿದರು.




ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ಫಾ.ವಲೇರಿಯನ್ ಸಿಕ್ವೇರಾ, ಪಾಲನ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡೀಸ್, ಸಿ. ನ್ಯಾನ್ಸಿ ಡಯಸ್, ಕಾರ್ಯದರ್ಶಿ ಲೀಗೋರಿ ವಾಸ್, ಆರ್ಥಿಕ ಸಮಿತಿ ಸದಸ್ಯರು, ಪಾಲನ ಮಂಡಳಿ ಸದಸ್ಯರು, ಇಂಜಿನಿಯರ್ ಅಜಯ್ ಡಿ.ಕುನ್ಹಾ ಮಡಂತ್ಯಾರು, ಗುತ್ತಿಗೆದಾರ ಅನಿಲ್ ಡಿಸೋಜಾ, ಮಾಜಿ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು, ಚರ್ಚ್ ನ ಗಣ್ಯರು, ಹಾಗೂ ಸಮಸ್ತ ಕ್ರೈಸ್ತ ಭಾಂದವರು ಭಾಗವಹಿಸಿದ್ದರು. ಆಯೋಗದ ಸಂಯೋಜಕಿ ಲವೀನಾ ಫೆರ್ನಾಂಡೀಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.