



ಬಂದಾರು: ಗ್ರಾಮ ಮೈರೋಳ್ತಡ್ಕ ದ.ಕ.ಜಿಲ್ಲಾ ಪಂಚಾಯತ್ ಉನ್ನತಿಕರಿಸಿದ ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಡಿ.13ರಂದು ಶಾಲಾ ವಠಾರದಲ್ಲಿ ನೆರವೇರಿತು.
ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಅವರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಶಾಲಾ ಕೊಠಡಿ ನೀಲ ನಕಾಶೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ನೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಗೌಡ ನಿರುoಬುಡ, ಅಂಡೆಕೇರಿ ಜುಮ್ಮಾ ಮಸೀದಿ ಧರ್ಮ ಗುರು ಶಫೀ ಅಹ್ಮನಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗುರುಪ್ರಸಾದ್, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪೊಲೀಸ್ ಪಿ.ಎಸ್. ವೆಂಕಪ್ಪ, ಹಿರಿಯ ವಿದ್ಯಾರ್ಥಿ ಅಂಚೆ ಇಲಾಖೆಯ ಸಹಾಯಕ ಅಧಿಕ್ಷಕರು ಮೋಹನ್ ಶೆಟ್ಟಿ ಬಾಂಗೇರು, ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಪರಮೇಶ್ವರಿ ಕೆ. ಗೌಡ, ಸುಚಿತ್ರಾ ಮುರ್ತಾಜೆ, ಕುಪ್ಪೆಟ್ಟಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಚoದ್ರಾವತಿ ಪ್ರಸ್ತಾವನೆಗೈದರು. ಶಾಲೆಗೆ ಬೆಂಚು, ಡೆಸ್ಕ್ ಕೊಡುಗೆ ನೀಡಿದ ದಾನಿಗಳಾದ ಲೀಲಾವತಿ ಗಿರಿಯಪ್ಪ ಪೂಜಾರಿ ಸೊರಗೆದಡಿ, ಶ್ರೀಮತಿ ಮತ್ತು ಬಾಬು ಗೌಡ ಮಡ್ಯಲಕಂಡ, ನಡುಮಜಲು ಕುಟುಂಬಸ್ಥರು, ವಾರಿಜ ಮತ್ತು ಧರ್ಣಪ್ಪ ಪೂಜಾರಿ ನೂಜಿ ಅವರನ್ನು ಸನ್ಮಾನಿಸಲಾಯಿತು.
ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಹುಮಾನ ವಿಜೇತರ ಪಟ್ಟಿಯನ್ನು ಪ್ರಭು ನಾಯ್ಕ ಎಲ್, ಸುಶೀಲಾ, ಅರ್ಚನಾ, ವೀಕ್ಷಿತಾ ಅವರು ವಾಚಿಸಿದರು. ತೀರ್ಥ ಕುಮಾರಿ ಸಾoಸ್ಕೃತಿಕ ಸಂಯೋಜನೆ ಮಾಡಿದರು. ಪೋಷಕರು, ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ ಸ್ಪರ್ಧೆಯು ನೇರವೇರಿತು. ಹಿರಿಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳು, ಶಿಕ್ಷಕ ವೃಂದ ಸಿಬ್ಬಂದಿ ವರ್ಗ ಸಹಕರಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಗೈದು, ಶಿಕ್ಷಕ ದಿನೇಶ್ ಸ್ವಾಗತಿಸಿ, ಸಹಶಿಕ್ಷಕಿ ರಾಜಶ್ರೀ ನಿರೂಪಿಸಿ, ಶಿಕ್ಷಕ ಶ್ರೀಧರ್ ಧನ್ಯವಾದವಿತ್ತರು.









