ಬೆಳಾಲು: ಶ್ರೀ ಧ.ಮಂ.ಅ.ಪ್ರೌ. ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

0

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ ಡಿ. 10ರಂದು ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಿಸಿ ಮಾತನಾಡಿದ ಮುಖ್ಯ ಅತಿಥಿ, ಶ್ರೀ ಆರಿಕೋಡಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೊಡಿ ” ಶಿಸ್ತು ಸಂಸ್ಕಾರಯುತ ಶಿಕ್ಷಣ ಪಡೆದಾಗ ಜವಾಬ್ದಾರಿಯುತ ನಾಗರಿಕನ ಸೃಷ್ಟಿಯಾಗುತ್ತದೆ ಇಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರವನ್ನ ಇತ್ತು ಉತ್ತಮ ಪ್ರಜೆಗಳನ್ನು ಸೃಷ್ಟಿಸುವ ಉತ್ತಮ ಶಿಕ್ಷಕ ಬಳಗ ಇಲ್ಲಿದೆ” ಎಂದರು.

ಅತಿಥಿಗಳಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಸುರೇಶ್ ಆಚಾರ್ಯ ಮಾತನಾಡಿ “ ಸಂಸ್ಥೆಯಲ್ಲಿ ಲಭ್ಯವಿರುವ ಉತ್ತಮ ಸಂಪನ್ಮೂಲಗಳನ್ನು ಅವಕಾಶವನ್ನಾಗಿ ಬಳಸಿಕೊಂಡು ಉತ್ತಮ ಸಾಧನೆಯನ್ನು ಮಾಡಲು ಈ ಶಾಲೆ ಅನುಕೂಲಕರವಾಗಿದೆ.”ಎಂದರು

ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಕುರ್ಕಿಲ, ಬೆಳಾಲು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಲಕ್ಷ್ಮಣಗೌಡ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ ಓಡಿಪ್ರೊಟ್ಟು ಬಹುಮಾನ ವಿತರಿಸಿ, ಶುಭ ಹಾರೈಸಿದರು. ಶಾಲಾ ನಾಯಕ ಮೋಹನ್ ಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ: ಬೆಳಾಲು ಲಕ್ಷ್ಮಣಗೌಡ ಅವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ‘ಸ್ಯಮಂತಕ ಮಣಿ’ ಯಕ್ಷಗಾನ ಬಯಲಾಟ ನಡೆಯಿತು. ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿ ತಮ್ಮ ಪ್ರತಿಭೆ ಪ್ರಚುರಪಡಿಸಿದರು.

ಎಸ್.ಡಿ.ಎಂ ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಧನ್ಯ ಕುಮಾರ್ ಎಂ. ಅವರು ಶಾಲೆಯ ವಾರ್ಷಿಕ ಸಂಚಿಕೆ ವಿದ್ಯಾರ್ಥಿ ಹಸ್ತಪ್ರತಿ ‘ನವ್ಯ ಜ್ಯೋತಿ’ ಬಿಡುಗಡೆಗೊಳಿಸಿ ಶಾಲೆಯ ವಿಶೇಷ ಪ್ರತಿಭೆಗಳನ್ನು ಪುರಸ್ಕರಿಸಿದರು.

ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತರಾದ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಾನಂದ ಅವರನ್ನು ಶಾಲೆಯಿಂದ ಗೌರವಿಸಲಾಯಿತು. ಕಳೆದ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯ ಸಾಧಕರನ್ನು, ಪ್ರಸಕ್ತ ವರ್ಷ ರಾಜ್ಯಮಟ್ಟದಲ್ಲಿ ‘ಕಣಾದ’ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನೇತ್ರಾವತಿ, ಆಶಾ, ಅನ್ವಿಕ , ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಹುಮಾನಗಳಿಸಿದ ಜಾಹ್ನವಿ, ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಭಾಗವಹಿಸಿದ ನೀರಜ್, ಸಾತ್ವಿಕ್ ಹಾಗೂ ಜಿಲ್ಲಾ ಮಟ್ಟದ ಪ್ರಾಚ್ಯ ಪ್ರಜ್ಞೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸೃಜನ್ಯ, ಆಯುಷತ್ ಸಂಶಿಯಾ, ಅಂಕಿತ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಿವೃತ್ತ ಮುಖ್ಯೋಪಾಧ್ಯಾಯ ಸೋಮಶೇಖರ ಶೆಟ್ಟಿ, ಎಸ್. ಡಿ. ಎಮ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಂತೋಷ್ ಸಲ್ದಾನ, ಎಸ್. ಡಿ. ಎಮ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ವಿದ್ಯಾಕಿರಣ್, ಪೆರಿಂಜೆಯ ಎಸ್. ಡಿ. ಎಮ್. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುಕುಂದ ಚಂದ್ರ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ದಯಾನಂದ ಪಿ. ಬೆಳಾಲು, ಬೆಳಾಲು ಸಿಂಧೂರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷೆ ನಿಶಾ ಬನಂದೂರು ಉಪಸ್ಥಿತರಿದ್ದು ಪ್ರತಿಭೆಗಳನ್ನು ಗೌರವಿಸಿದರು.

ಶಾಲಾ ಮುಖ್ಯ ಶಿಕ್ಷಕ ಜಯರಾಮ ಮಯ್ಯ ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕರಾದ ಗಣೇಶ್ವರ್ ಹಾಗೂ ಕೃಷ್ಣಾನಂದ ಕ್ರಮವಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕರಾದ ಕೋಕಿಲ ನಿರೂಪಿಸಿದರು. ಕಿರಣ್ ವಂದಿಸಿದರು.

LEAVE A REPLY

Please enter your comment!
Please enter your name here