ಬೆಳ್ತಂಗಡಿ: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಇನ್ಸ್ಪಾಯರ್ ಅವಾರ್ಡ್ ಯೋಜನೆಯಡಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅನಿಲ್ (10ನೇ) ಮತ್ತು ಆನ್ಸನ್ ಲೋಬೊ (9ನೇ) ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲಾ ಮುಖ್ಯೋಪಾಧ್ಯಾಯ ಕ್ಲಿಫರ್ಡ್ ಪಿಂಟೋ ಅಭಿನಂದಿಸಿದರು. ವಿಜ್ಞಾನ ಶಿಕ್ಷಕಿಯರಾದ ಪ್ರೀತಾ ಡಿಸೋಜ ಮತ್ತು ಮೇರಿ ಸುಜಾ ಸಹಕರಿಸಿದರು.