ಬದುಕು ಕಟ್ಟೋಣ ಬನ್ನಿ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ

0

ಧರ್ಮಸ್ಥಳ: ಗ್ರಾಮದ ನೇತ್ರಾವತಿ ನದಿಯನ್ನು ಸ್ವಚ್ಛತೆ ಮಾಡುವ ಕಾರ್ಯಕ್ರಮವು ಮಾ. 16ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದುಕು ಕಟ್ಟೋಣ ಬನ್ನಿ ತಂಡದ ಅಧ್ಯಕ್ಷ ಬಿ.ಕೆ ಧನಂಜಯ್ ರಾವ್ ವಹಿಸಿದ್ದರು.

ವಂದೇ ಮಾತರಂ ನನ್ನ ಸೇವೆ ದೇಶಕ್ಕಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ಬದುಕು ಕಟ್ಟೋಣ ಬನ್ನಿ, ಸೇವಾ ಟ್ರಸ್ಟ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಶ್ರೀ ಧ.ಮಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಶ್ರೀ ಧ.ಮಂ. ಸ್ಪೋರ್ಟ್ಸ್ ಕ್ಲಬ್ ಉಜಿರೆ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಇದರ ನೇತೃತ್ವದಲ್ಲಿ ಹಾಗೂ ಬೆಳ್ತಂಗಡಿ ತಾಲೂಕು ಆರಕ್ಷಕ ಠಾಣಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ನೇತ್ರಾವತಿ ಸ್ವಚ್ಛತಾ ಕಾರ್ಯವು ನಡೆಯಿತು.

ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಬೆಳ್ತಂಗಡಿ ಪೋಲಿಸ್ ಠಾಣ ವೃತ್ತ ನಿರೀಕ್ಷಕ ಬಿ.ಜಿ.ಸುಬ್ಬಪುರ್ ಮಠ್, ಧರ್ಮಸ್ಥಳ ಠಾಣೆ ಪಿ. ಎಸ್. ಐ ಕಿಶೋರ್ ಕುಮಾರ್, ಬೆಳ್ತಂಗಡಿ ಪತ್ರಕರ್ತ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ, ಶ್ರೀ ಧ. ಮಂ ಕಾಲೇಜು ಪ್ರಾಂಶುಪಾಲ ವಿಶ್ವನಾಥ್ ಪಿ., ಎಸ್. ಡಿ .ಎಂ. ಕ್ರೀಡಾ ಸಂಘ ಕಾರ್ಯದರ್ಶಿ ರಮೇಶ್ ಕೆ, ಉಪಸ್ಥಿತದ್ದರು.

ಕಾರ್ಯಕ್ರಮವನ್ನು ರಾ. ಸೇ. ಯೋ. ಘಟಕ ಶ್ರೀ ಧ. ಮಂ. ಕಾಲೇಜು, ಉಜಿರೆ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ ನಿರೂಪಿಸಿ, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ವಂದಿಸಿದರು.

LEAVE A REPLY

Please enter your comment!
Please enter your name here